Uncategorized
ತೈಲಬೆಲೆಯೊಂದಿಗೆ ಅಗತ್ಯ ವಸ್ತುಗಳ ಬೆಲೆಯೂ ಇಳಿಸಿ: ಯುವ ಜಾಗೃತಿ ಮತದಾರರ ವೇದಿಕೆ ಆಗ್ರಹ
ಚಿಕ್ಕಮಗಳೂರು: ತೈಲ ಬೆಲೆಯಿಂದ ತತ್ತರಿಸಿದ ವಾಹನ ಸವಾರರಿಗೆ ಕೊಂಚ ಸಮಾಧಾನಪಡಿಸಿರುವ ಸರ್ಕಾರದ ಕ್ರಮವನ್ನು ಯುವಜಾಗೃತಿ ಮತದಾರರ ವೇದಿಕೆ ಸ್ವಾಗತಿಸಿದ್ದು, ತೈಲಬೆಲೆಯನ್ನು ಇನ್ನಷ್ಟು ಇಳಿಸಿ, ಬಡವರ್ಗದ ಜನರಿಗೆ ಅಗತ್ಯ ವಸ್ತುಗಳು ಕೈಗೆಟುಕುವಂತೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದೆ.
ದಿಢೀರ್ ತೈಲಬೆಲೆ ಇಳಿಕೆಗೆ ದೇಶದಲ್ಲಿ ನಡೆದಿರುವ ಉಪಚುನಾವಣೆಯ ಫಲಿತಾಂಶವೇ ಕಾರಣವಾಗಿದೆ. ಬಿಜೆಪಿಯನ್ನು ಬಹುತೇಕ ಕ್ಷೇತ್ರದಲ್ಲಿ ಜನ ಸೋಲಿಸಿದ್ದರಿಂದ ಎಚ್ಚೆತ್ತಿರುವಂತಿದೆ. ಮತದಾರರು ಜಾಗೃತರಾಗಿ ಈ ರೀತಿ ಮತದಾನದ ಮೂಲಕ ಹೊಡೆತ ಕೊಟ್ಟರೆ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ. ಮತದಾರರು ಯಾವತ್ತೂ ತನ್ನ ಪ್ರಭುತ್ವವನ್ನು ಎಂದೂ ಮರೆಯಬಾರದು ಎಂದು ವೇದಿಕೆ ಅಧ್ಯಕ್ಷ ಮಹೇಂದ್ರ ಕುಮಾರ್ ಫಲ್ಗುಣಿ ಆಗ್ರಹಿಸಿದ್ದಾರೆ.