Uncategorized
ಗೋಕರ್ಣದಲ್ಲಿ ಸಮುದ್ರ ಪಾಲಾಗುತ್ತಿದ್ದ ಇಬ್ಬರು ಯುವಕರ ರಕ್ಷಣೆ
ಕಾರವಾರ : ಸಮುದ್ರದಲ್ಲಿ ಈಜಾಡಲು ತೆರಳಿದ್ದ ಇಬ್ಬರು ಯುವಕರು ನೀರಿನ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿರುವಾಗ ಅವರನ್ನು ರಕ್ಷಿಸಿದ ಘಟನೆ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ನಡೆದಿದೆ.
ಬೆಂಗಳೂರಿನ ಉದಯಕುಮಾರ್ (28), ಮಂಜುನಾಥ (26) ಪ್ರಾಣಾಪಾಯದಿಂದ ರಕ್ಷಣೆಗೊಳಗಾದ ಯುವಕರಾಗಿದ್ದಾರೆ.
ಬೆಂಗಳೂರು ಮೂಲದ 13 ಯುವಕರು ಇಂದು ಮುಂಜಾನೆ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದು,ಇವರೆಲ್ಲರೂ ಮುಖ್ಯ ಕಡಲ ತೀರದ ವೀಕ್ಷಣೆಗೆಂದು ತೆರಳಿದ್ದರು.ತರುವಾಯ 13 ಯುವಕರು ಮಧ್ಯಾಹ್ನದ ಹೊತ್ತಿಗೆ ಸಮುದ್ರದಲ್ಲಿಳಿದು ನೀರಿನಲ್ಲಿ ಈಜಾಡುತ್ತಿದ್ದರು.ಜೋರಾದ ನೀರಿನ ಸುಳಿಗೆ ಸಿಲುಕಿ ಉದಯಕುಮಾರ್ ಮತ್ತು ಮಂಜುನಾಥ ಎಂಬಿಬ್ಬ ಯುವಕರು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವಾಗ ಅವರನ್ನು ಜೀವರಕ್ಷಕ ಸಿಬ್ಬಂದಿಗಳಾದ ವಿಶ್ವಾಸ್ ಎನ್.ಭಟ್,ಶಿವಪ್ರಕಾಶ ಅಂಬಿಗ ಹಾಗೂ ಪ್ರವಾಸಿ ಮಿತ್ರ ಮಣಿಕಂಠ ನಾಯ್ಕ ಅವರು ಜೀವದ ಹಂಗನ್ನು ತೊರೆದು ರಕ್ಷಣೆ ಮಾಡಿದ್ದಾರೆ.ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.