Uncategorized

ಬೆಳಗಾವಿ: ಪ್ರೀತಿಸಿದ್ದಕ್ಕೆ ಯುವಕನ ಕೊಲೆ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಖಾನಾಪುರ ದ ರೈಲ್ವೆ ಟ್ರ್ಯಾಕ್ ಮೇಲೆ ಕೊಲೆ ಆದ ರೀತಿಯಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಬೆಳಗಾವಿ ನಗರದ ನಿವಾಸಿ ಮೂಲತಃ ಖಾನಪುರದ ವ್ಯಕ್ತಿಯಾಗಿರುವ ಅರ್ಬಾಜ್ ಮುಲ್ಲಾ ಎನ್ನುವ ಯುವಕನ ಶವ ದೊರೆತಿತ್ತು. ಅದು ಪ್ರೀತಿಸಿದ್ದಕ್ಕಾಗಿ ನಡೆದ ಕೊಲೆ ಎಂಬುದು ಈಗ ಬಯಲಾಗಿದೆ.

ಸೆಪ್ಟೆಂಬರ್28 ರಂದು ಶವ ದೊರೆತು ಹಲವು ಗಂಟೆಗಳು ಕಳೆದರು ಕೂಡ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಕೂಡ ಮುಂದೆ ಬಂದಿರಲಿಲ್ಲ. ಆ ದಿನ ವ್ಯಾಪ್ತಿ ಜಂಜಾಟದಲ್ಲಿ ಬಿದ್ದಿದ್ದ ರೈಲ್ವೆ ಪೊಲೀಸರು ಹಾಗೂ ಸ್ಥಳೀಯ ಖಾನಾಪುರ ಪೋಲಿಸುರು ಬೇಗ ಕಾರ್ಯ ಪ್ರವೃತ್ತರಾಗಿರಲಿಲ್ಲಾ, ತದಂತನರ ರೈಲು ಹಳಿ ಮೇಲೆ ಶವ ದೊರೆತಿರುವುದರಿಂದ ಕೇಸ್ ದಾಖಲಿಸಿಕೊಂಡಿದ್ದ ಬೆಳಗಾವಿ ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದರು.

ಸದ್ಯ ಪೊಲೀಸ್ ಉನ್ನತ ಮಾಹಿತಿಗಳು ಹಾಗೂ ಮೂಲಗಳ ಮಾಹಿತಿ ಪ್ರಕಾರ, ಬೆಳಗಾವಿ ಜಿಲ್ಲೆಯಲ್ಲಿ ಸಕ್ರಿಯರಾಗಿದ್ದ ಹಿಂದೂ ಸಂಘಟನೆಯ ಕೆಲ ಯುವಕರು ಕೇಸ್ ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಈಗಾಗಲೇ ರೈಲ್ವೆ ಪೊಲೀಸರು ಹಿಂದೂ ಹಲವು ಹಿಂದೂ ಪರ ಸಂಘಟನೆ ಯುವಕರನ್ನ ವಶಕ್ಕೆ ಪಡೆದಿದ್ದು ಆದ್ರೆ ಕೇಸ್ ಬಗ್ಗೆ ಮಾತ್ರ ತುಟಿ ಪಿಟಕ್ ಎನ್ನುತ್ತಿಲ್ಲಾ.

ಇನ್ನು ಕೊಲೆ ಪ್ರಕರಣವನ್ನು ಬೆಳಗಾವಿ ಜಿಲ್ಲಾ ಪೊಲೀಸರಿಗೆ ಹಸ್ತಾಂತರಿಸಲು ರೈಲ್ವೆ ಪೊಲೀಸರು ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಇತ್ತ ಕುಟುಂಬದವರು ಕೂಡ ಕೆಲ ಪೊಲೀಸರು ಹಾಗೂ ಮುಖಂಡರಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದು ನಮಗೆ ನ್ಯಾಯ ಕೊಡಿಸುವಂತೆ ಗೊಗೆರೆಯುತ್ತಿದ್ದಾರೆ.

ಅರ್ಬಾಜ್ ಮುಲ್ಲಾ ಕೊಲೆಗೆ ಅನ್ಯ ಕೋಮಿನ ಯುವತಿಯನ್ನ ಪ್ರೀತಿಸಿರುವುದೇ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸದ್ಯ ಬಂಧಿತ ಆರೋಪಿಗಳ ಗುರುತನ್ನ ಪೊಲೀಸರು ಸ್ಪಷ್ಟಪಡಿಸಬೇಕಿದ್ದು ಅಧಿಕಾರಿಗಳು ಯಾವ ಆಯಾಮದಲ್ಲಿ ತನಿಖೆಯನ್ನ ಮುಂದುವರೆಸುತ್ತಾರೆ ಕಾದು ನೋಡಬೇಕಿದೆ

Related Articles

Leave a Reply

Your email address will not be published.

Back to top button