ಒಂಟಿಯಾಗಿ ಅಲೆಯುತ್ತಿದ್ದ ಯುವತಿ; ವಿಪತ್ತು ನಿರ್ವಹಣಾ ತಂಡದ ಸಹಾಯದಿಂದ ಮರಳಿ ಮನೆಗೆ
ಚಿಕ್ಕಮಗಳೂರು: ಯುವತಿಯೋರ್ವಳು ಕಳೆದ ಒಂದು ವಾರದ ಹಿಂದೆ ತನ್ನ ಮನೆಯಿಂದ ಕಾಣೆಯಾಗಿ ಒಂದಷ್ಟು ದೂರದ ಗ್ರಾಮವೊಂದರಲ್ಲಿ ಒಂಟಿಯಾಗಿ ಅತಂತ್ರ ಪರಿಸ್ಥಿತಿಯಲ್ಲಿ ಅಲೆಯುತ್ತಿದ್ದಾಗ ಆಕೆಯನ್ನು ಮರಳಿ ಮನೆಗೆ ಸೇರಿಸಿರುವ ಘಟನೆ ನಡೆದಿದೆ.
ಗಂಗೆ (26) ಎಂಬಾಕೆ ಅ.18ರಂದು ಮೂಲರಹಳ್ಳಿ ಬಸ್ ನಿಲ್ದಾಣದ ಬಳಿ ಕಾಣಿಸಿಕೊಂಡಿದ್ದಳು. ಮೂಡಿಗೆರೆಯ ಶಿವಣ್ಣಗೌಡ ಎಂಬವರಿಗೆ ಕಾಣಿಸಿಕೊಂಡು ಆಕೆಯನ್ನು ವಿಚಾರಿಸುವಾಗ ಸ್ಪಷ್ಟವಾದ ವಿಳಾಸ ತಿಳಿಯಲಾಗದೆ ತಕ್ಷಣ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾತಂಡದ ಸಹಾಯದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಒಪ್ಪಿಸಲಾಗಿತ್ತು.
ಕೊನೆಗೆ ಆಕೆ ಮೂಡಿಗೆರೆ ತಾಲೂಕಿನ ಕಡಿದಾಳು ಗ್ರಾಮದ ವಾಸಿ ಎಂದು ಸ್ಪಷ್ಟವಾದಾಗ ಇಲಾಖೆ ಸಿಬ್ಬಂದಿ ವರ್ಗದವರೊಂದಿಗೆ ಆಕೆಯನ್ನು ಮನೆಗೆ ಕಳುಹಿಸಲಾಯಿತು. ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕ ಪ್ರವೀಣ್ ಪೂಜಾರಿ, ರಘುಗೌಡ, ಶಿವಗಿರಿ ಸೇವಕರ ತಂಡದ ವೆಂಕಟೇಶ್, ಶಿವನಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳಾದ ನೀಲಂ ನಯೀಂ, ನಂದಿನಿ, ಎಚ್ ಸಿ ರಘುಕುಮಾರ್ ಇದ್ದರು.