Uncategorized

ಪೇಡಾ ನಗರಿ ಜನತೆಗೂ ತಟ್ಟಿದ ವಾಯು ಭಾರ ಕುಸಿತದ ಬಿಸಿ: ಧಾರವಾಡದಲ್ಲಿ ಗುಡುಗು ಸಮೇತ ವರುಣನ‌ ಅರ್ಭಟ

ಧಾರವಾಡ: ಪೇಡಾ ನಗರಿ ಜನತೆಗೂ ಇಂದು‌ ವಾಯು ಭಾರ ಕುಸಿತದ ಬಿಸಿ ತಟ್ಟಿದ್ದು, ಧಾರವಾಡದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮಳೆರಾಯ ಅರ್ಭಟ ತೋರಿಸಿದ್ದಾನೆ. ಇಂದು ಮುಂಜಾನೆಯಿಂದಲ್ಲೇ ನಗರದಾದ್ಯಂತ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಆದರೆ ಸಂಜೆವೇಳೆಗೆ ವರುಣ ಗುಡುಗು ಸಮೇತವಾಗಿ ಅರ್ಭಟಿಸಿದ್ದು, ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಳೆದ ಮೂರು ದಿನಗಳಿಂದ ರಾತ್ರಿ ವೇಳೆ ನಗರದಲ್ಲಿ ಮಳೆಯಾಗುತ್ತಾ ಬಂದಿದ್ದು, ಆದರೆ ಇಂದು ಸಂಜೆ‌ ವೇಳೆಗೆ ಸುರಿದ ಗುಡುಗು ಸಮೇತ ಮಳೆಯಿಂದಾಗಿ ಈಗ ನಗರದ ತಗ್ಗು ಪ್ರದೇಶ ನಿವಾಸಿಗಳಿಗೆ ಆತಂಕ ಸೃಷ್ಟಿ ಮಾಡಿದೆ.‌

ನಗರದಲ್ಲಿ ಸಂಜೆವೇಳೆಗೆ ಮಳೆರಾಯನ ಆಗಮನವಾಗಿದ್ದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮುಂಜಾನೆ ವಿವಿಧ ಕೆಲಸಗಳ ನಿಮಿತ್ತ ಹೊರಗಡೆ ಹೋಗಿದ್ದ ಜನರು ಮನೆಗಳಿಗೆ ತೆರಳಲು ಒಂದು ಗಂಟೆಗೂ ಹೆಚ್ಚು ಕಾಲ ಪರದಾಡುವಂತಾಗಿದೆ. ಇನ್ನೂ ಗ್ರಾಮೀಣ ಭಾಗದಲ್ಲಿ ಕೆಲವು ರೈತರಿಗೆ ವರುಣನ ಆಗಮನ ಸಂತಸ ತಂದಿದ್ದರೆ, ಇನ್ನೂ ಕೆಲವು ರೈತರಿಗೆ ಮಳೆರಾಯ ಆತಂಕ ಸೃಷ್ಟಿ ಮಾಡಿದ್ದಾನೆ. ಈಗಾಗಲೇ ಸೋಯಾಬಿನ, ಉದ್ದು, ಶೇಂಗಾ ಬೆಳೆಗಳನ್ನು ರೈತರು ತೆಗೆಯುತ್ತಿದ್ದು, ಮಳೆಗೆ ಎಲ್ಲಿ ಬೆಳೆ ಹಾಳಾಗುತ್ತದೆ ಎಂಬ ಆತಂಕ ಕೆಲವರಲ್ಲಿ ಮನೆ ಮಾಡಿದೆ.

ಧಾರವಾಡ ತಗ್ಗು ಪ್ರದೇಶಗಳಾದ ಜನತ ನಗರ, ಶ್ರೀರಾಮ ನಗರ, ಮೆಹಬೂನ ನಗರದ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಮಳೆ ಹೀಗೆ ಮುಂದುವರೆದರೆ ಎಲ್ಲಿ ಮನೆಗಳಿಗೆ ನೀರು ನಗ್ಗುತ್ತವೆ ಎಂಬ ಆತಂಕ ನಗರ ತಗ್ಗುವಾಸಿ ನಿವಾಸಿಗಳಲ್ಲಿ ಮನೆ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button