Uncategorized

ಗ್ರಾಮಸ್ಥರಿಂದ ಪ್ಲಿಫ್‌ ಕಾರ್ಟ್ ಕಂಪನಿ ವಿರುದ್ಧ ಆಕ್ರೋಶ: ಕಚೇರಿಯಿಂದ ಕೆರೆಗೆ ಸೇರುತ್ತಿರುವ ಕೊಳಚೆ ನೀರು ತಡೆಯುವಂತೆ ಆಗ್ರಹ

ಧಾರವಾಡ: ಫ್ಲಿಪ್ ಕಾರ್ಟ್‌ ಕಚೇರಿಯ ನಿರ್ಲಕ್ಷ್ಯ ಖಂಡಿಸಿ ಹಾಗೂ ಗ್ರಾಮದ ಕೆರೆಗೆ ಸೇರುತ್ತಿರುವ ಮಲಮೂತ್ರ, ಕೊಳಚೆ ನೀರು ತಡೆಯುವಂತೆ ಅಗ್ರಹಿಸಿ, ಧಾರವಾಡ ತಾಲೂಕಿನ ಕೋಟೂರು ಗ್ರಾಮದ ಗ್ರಾಮಸ್ಥರು ಪ್ರತಿಭಟನೆ ಧರಣಿ ನಡೆಯಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕೋಟೂರು ಗ್ರಾಮದ ಬಳಿ ಸ್ಥಾಪನೆ ಆಗಿರುವ ಪ್ಲಿಫ್‌ ಕಾರ್ಟ್ ಕಂಪನಿಯ ಕಚೇರಿಯ ಮುಂಭಾಗದಲ್ಲಿ, ಗ್ರಾಮ ಪಂಚಾಯತಿ ಸದಸ್ಯ ದಿಲಾವರ್ ನೇತೃತ್ವದಲ್ಲಿ‌ ಮುತ್ತಿಗೆ ಹಾಕಿ ಧರಣಿ ನಡೆಸಿ ಗ್ರಾಮಸ್ಥರು ಪ್ಲಿಫ್‌ ಕಂಪನಿಯ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ‌

ಇನ್ನೂ ಪ್ಲಿಫ್‌ ಕಾರ್ಟ್ ಕಂಪನಿಯು ಗ್ರಾಮದ ಬಳಿ ಸ್ಥಾಪನೆಯಾಗುವ ಮುಂಚೆ ಎಲ್ಲವು ಸರಿ ಇತ್ತು. ಗ್ರಾಮದ ದಾಸನಕಟ್ಟಿ ಕೆರೆಯ ನೀರವು ಸ್ವಚ್ಚವಾಗಿತ್ತು, ಆದರೆ ಈಗ ಪ್ಲಿಫ್‌ ಕಂಪನಿ ಕಚೇರಿ ಕಾರ್ಯಾರಂಭ ಮಾಡಿದ ದಿನಗಳಿಂದ ಗ್ರಾಮದ ಕೆರೆಗೆ ಕೊಳಚೆ ನೀರು ಸೇರಿದಂತೆ ಮಲಮೂತ್ರ ಸೇರುತ್ತಿದೆ. ಇದರಿಂದಾಗಿ ಕೆರೆಯ ನೀರು ಈಗ ಕಲುಷಿತಗೊಳ್ಳುತ್ತಿವೆ.

ಮೊದಲೇ ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಆತಂಕದಲ್ಲಿದ್ದಾರೆ. ಹೀಗಿರುವಾಗ, ಪ್ಲಿಫ್‌ ಕಾರ್ಟ್ ಕಂಪನಿಯ ನಿರ್ಲಕ್ಷ್ಯ ಎದ್ದು‌ ಕಾಣುತ್ತಿದೆ. ಕೂಡಲೇ ಗ್ರಾಮದ ಕೇರೆಗೆ ಸೇರುತ್ತಿರುವ ಮಲಮೂತ್ರ ಹಾಗೂ ಕೊಳಚೆ ನೀರನ್ನು ಬೇರೆಡೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಚ್ಚರಿಕೆ ನೀಡಿದರು.

Related Articles

Leave a Reply

Your email address will not be published.

Back to top button