Uncategorized

ರಾಜ್ಯದಲ್ಲಿ ಅತೀಹೆಚ್ಚು ಲಸಿಕೆ ವಿತರಿಸಿದ ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆ ಮುಂಚೂಣಿ

ಉಡುಪಿ: ರಾಜ್ಯದಲ್ಲಿ ಅತೀಹೆಚ್ಚು ಲಸಿಕೆ ವಿತರಿಸಿದ ಜಿಲ್ಲೆಗಳಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದೆ. ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ 10 ಲಕ್ಷ ಜನರಿಗೆ ಲಸಿಕೆ ನೀಡಬೇಕೆಂದು ರಾಜ್ಯ ಸರ್ಕಾರ ಗುರಿ ನಿಗದಿ ಮಾಡಿತ್ತು. ಆನಂತರದಲ್ಲಿ ಈ ಗುರಿಯನ್ನು 9 ಲಕ್ಷಕ್ಕೆ ಪರಿಷ್ಕರಿಸಲಾಗಿದೆ. ಈ ಲೆಕ್ಕಚಾರದ ಪ್ರಕಾರ ಉಡುಪಿ ಜಿಲ್ಲೆ ಶೇಕಡ ನೂರರಷ್ಟು ಲಸಿಕೆ ನೀಡಿದ ಜಿಲ್ಲೆಯಾಗಿ ಹೊರಹೊಮ್ಮಿದೆ.

ಸದ್ಯದ ಗುರಿಯ ಪ್ರಕಾರ ಜಿಲ್ಲೆಯಲ್ಲಿ 9,01,568 ಮಂದಿಗೆ ಪ್ರಥಮ ಡೋಸ್ ನೀಡಬೇಕಾಗಿತ್ತು. ಆದರೆ ಈಗಾಗಲೇ ಉಡುಪಿ ಜಿಲ್ಲೆಯಲ್ಲಿ 9,07,085 ಮಂದಿಗೆ ಲಸಿಕೆ ನೀಡಿ ಶೇಕಡ 101 ಸಾಧನೆ ದಾಖಲಾಗಿದೆ. ರಾಜ್ಯದಲ್ಲಿ ಉಡುಪಿ ಜಿಲ್ಲೆ ಎರಡನೇ ಸ್ಥಾನವನ್ನು ಪಡೆದಿದೆ.

ಎರಡನೇ ಡೋಸ್ ನೀಡುವಲ್ಲೂ ಶೇಕಡಾ 48ರಷ್ಟು ಸಾಧನೆ ಮಾಡಿರುವ ಉಡುಪಿ ಜಿಲ್ಲೆ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಜಿಲ್ಲೆಯ ಮಣಿಪಾಲ ಲಸಿಕೆ ನೀಡುವುದರಲ್ಲಿ ಮುಂಚೂಣಿಯಲ್ಲಿದೆ. ಆರೋಗ್ಯ ಸಚಿವ ಡಾ.ಸುಧಾಕರ್ ಜಿಲ್ಲಾ ಆರೋಗ್ಯ ಇಲಾಖೆಯನ್ನು ಈ ವಿಚಾರದಲ್ಲಿ ಶ್ಲಾಘಿಸಿದ್ದಾರೆ.

Related Articles

Leave a Reply

Your email address will not be published.

Back to top button