Uncategorized

ಬಟ್ಟೆ ತೊಳೆಯಲು ಹೋಗಿ ಇಬ್ಬರು ಮಹಿಳೆಯರು ಕೆರೆ ಪಾಲು: ಐವರ ರಕ್ಷಣೆ

ಬಾಗಲಕೋಟೆ: ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಇಬ್ಬರು ಮಹಿಳೆಯರು ನೀರುಪಾಲಾದ ಘಟನೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ಗಂಜಿಕೆರೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದ್ದು, ಲಲಿತಾ ಕತ್ತಿ(37), ಅನುಪಮಾ ದೊಡ್ಡಮನಿ(20)ಮೃತರಾಗಿದ್ದು,
ಕೆರೆಯಲ್ಲಿ ಮೊದಲು ಬಿದ್ದ ಮಹಿಳೆಯನ್ನು ರಕ್ಷಿಸಲು 6 ಜನ ಹೋಗಿದ್ದಾರೆ.‌ ಕೆರೆಯಲ್ಲಿ ಬಿದ್ದ ಐವರ ರಕ್ಷಣೆ ಮಾಡಲಾಗಿದ್ದು. ರಕ್ಷಣೆಯಾದ ಐವರಲ್ಲಿ ಓರ್ವ ಪುರುಷ ನಾಲ್ವರು ಮಹಿಳೆಯರಿದ್ದಾರೆ.

ಮೃತ ಮಹಿಳೆಯರು ಒಂದೇ ಕುಟುಂಬಕ್ಕೆ ಸೇರಿದವರಿದ್ದಾರೆ. ಸ್ಥಳೀಯರು ಹಾಗೂ ಮೀನುಗಾರರ ಸಹಾಯದಿಂದ ಐವರ ರಕ್ಷಣೆ ಮಾಡಲಾಗಿದೆ. ಸ್ಥಳಕ್ಕೆ ಗುಳೇದಗುಡ್ಡ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸ್ಥಳೀಯರ ಹಾಗೂ ಮೀನುಗಾರರ ಸಮಯಪ್ರಜ್ಞೆಯಿಂದ ಐವರು ಬದುಕುಳಿದಿದ್ದಾರೆ.

Related Articles

Leave a Reply

Your email address will not be published.

Back to top button