Uncategorized

ದ್ವಿಚಕ್ರ ವಾಹನ ಖದೀಮನ ಸೆರೆ

ಚಿಕ್ಕಮಗಳೂರು: ದ್ವಿಚಕ್ರ ವಾಹನಗಳನ್ನು ನಿರಂತರವಾಗಿ ಕಳವು ಮಾಡುತ್ತಿದ್ದ ಆರೋಪಿಯನ್ನು ಅಜ್ಜಂಪುರ ಪೊಲೀಸರು ಸೆರೆಹಿಡಿದು, ಆತನಿಂದ ವಿವಿಧ ಕಂಪನಿಯ ರೂ.5.10 ಲಕ್ಷ ಮೌಲ್ಯದ 14 ಬೈಕ್ ಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ವ್ಯಕ್ತಿಯೊಬ್ಬರು ಇತ್ತೀಚೆಗೆ ತಮ್ಮ ದ್ವಿಚಕ್ರ ವಾಹನ ಕಳುವಾಗಿರುವ ಬಗ್ಗೆ ಅಜ್ಜಂಪುರ ಪೊಲೀಸರಿಗೆ ದೂರು ನೀಡಿದ್ದರು. ಠಾಣಾಧಿಕಾರಿ ಲಿಂಗರಾಜ್ ನೇತೃತ್ವದಲ್ಲಿ ವಾಹನಗಳ ತಪಾಸಣೆ ಕಾರ್ಯಾಚರಣೆ ನಡೆಯುತ್ತಿದ್ದಾಗ ಬೈಕ್ ನಲ್ಲಿ ಅನುಮಾನಾಸ್ಪದವಾಗಿ ಸಂಚಾರ ನಡೆಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು.

ವಿಚಾರಣೆಯ ವೇಳೆ ಶಿವನಿಯ ಉಮೇಶ್ ಎಂಬಾತ ಬೈಕ್ ಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಎಸ್ಪಿ ಅಕ್ಷಯ್ ತಿಳಿಸಿದ್ದಾರೆ.

ಅಪರಾಧ ವಿಭಾಗ ಠಾಣಾಧಿಕಾರಿ ಮಂಜುಳಾಬಾಯಿ, ಸಿಬ್ಬಂದಿಗಳಾದ ಕೆ ಕೆ ನಾಗೇಶ್, ಬಸವರಾಜಪ್ಪ, ಶಿವಕುಮಾರ್, ಕಿರಣ್ ಕುಮಾರ್, ಪರಮೇಶ್ವರ ನಾಯ್ಕ ಅವರಿಗೆ ವಿಶೇಷ ಬಹುಮಾನ ಘೋಷಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button