Uncategorized

ಅಥಣಿ: ಟ್ರ್ಯಾಕ್ಟರ್ ಟ್ರೈಲರ್ ಪಲ್ಟಿ ಓರ್ವ ಸ್ಥಳದಲ್ಲೇ ಸಾವು: ಇನ್ನೋರ್ವ ಆಸ್ಪತ್ರೆಗೆ ರವಾನೆ

ಬೆಳಗಾವಿ: ಟ್ರ್ಯಾಕ್ಟರ್ ಟ್ರೈಲರ್ ಪಲ್ಟಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು ಸಂಭವಿಸಿದ ದಾರುಣ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತಾಂವಶಿ ಗ್ರಾಮದ ಸಮೀಪದಲ್ಲಿ ಸಂಭವಿಸಿದೆ.

ಮದಭಾವಿ ಗ್ರಾಮದ ಯುವಕ ಸಚಿನ ರಾಯಪ್ಪ ನಿವಲಗಿ (25) ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದರಿಂದ ಅವರನ್ನು ಅಥಣಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್ ಸವಾರರು ಸಂಚಾರ ಮಾಡುವ ಸಂದರ್ಭದಲ್ಲಿ ಕಾರ್ಖಾನೆಗೆ ಕಬ್ಬು ರವಾನೆ ಮಾಡುವ ಟ್ರ್ಯಾಕ್ಟರ್ ಟ್ರೈಲರ್ ಪಿನ್ ಕಟ್ಟಾಗಿ ಈ ಅವಘಡ ಸಂಭವಿಸಿದೆ. ಅಥಣಿ ತಾಲೂಕಿನ ಅನಂತಪುರ- ತಾಂವಶಿ ರಸ್ತೆ ಮೇಲೆ ಅಪಘಾತ ಸಂಭವಿಸಿದ್ದು. ಅಥಣಿ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಕಟಾವಿನ ಹಂಗಾಮ ಪ್ರಾರಂಭವಾಗಿದ್ದರಿಂದ ಕಾರ್ಖಾನೆಗಳಿಗೆ ಟ್ರ್ಯಾಕ್ಟರ್ ಮುಖಾಂತರ ಕಬ್ಬು ರವಾನೆ ಮಾಡಲಾಗುತ್ತಿದೆ. ಕೆಲವು ಟ್ಯಾಕ್ಟರ್ ಚಾಲಕರು ಅತಿಯಾದ ವೇಗಕ್ಕೆ ತಾಲೂಕಿನಲ್ಲಿ ಅಪಘಾತಗಳು ಸಾಮಾನ್ಯವಾಗಿದೆ. ಸ್ಥಳೀಯ ಪೊಲೀಸರು ಇವರ ಮೇಲೆ ನಿಗಾ ಇಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published.

Back to top button