Uncategorized

ಮುರುಡೇಶ್ವರ: ಸಮುದ್ರದ ಅಲೆಗೆ ಕೊಚ್ಚಿಹೋಗುತ್ತಿದ್ದ ಮೂವರು ಪ್ರವಾಸಿಗರ ರಕ್ಷಣೆ

ಕಾರವಾರ : ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಮುರುಡೇಶ್ವರ ಕಡಲ ತೀರದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಲಾಕ್​​ಡೌನ್​​ ತೆರವು ಬಳಿಕ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ.ಹೀಗೆ ಪ್ರವಾಸಕ್ಕೆಂದು ಶಿವಮೊಗ್ಗದಿಂದ ಬಂದಿದ್ದ 13 ಜನರ ತಂಡ ಧರ್ಮಸ್ಥಳ,ಕೊಲ್ಲೂರು ಹಾಗೂ ವಿವಿಧ ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.ಶುಕ್ರವಾರ ಮುರುಡೇಶ್ವರಕ್ಕೆ ಬಂದಿದ್ದು,ಶಿವನ ದರ್ಶನ ಪಡೆದ ಬಳಿಕ ಮೋಜು,ಮಸ್ತಿ ಮಾಡಲು ಸಮುದ್ರಕ್ಕಿಳಿದಿದ್ದಾರೆ.

ಈ ವೇಳೆ 13 ಜನರ ತಂಡದಲ್ಲಿದ್ದ ನಾಲ್ವರು ಯುವಕರು ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದಾರೆ.ನಂತರ ಓರ್ವ ಈಜಿಕೊಂಡು ದಡಕ್ಕೆ ಬಂದಿದ್ದಾನೆ.ಮತ್ತೆ ಮೂವರನ್ನು ಅಲ್ಲಿನ ಬೀಚ್ ಮೇಲ್ವಿಚಾರಕರು ಹಾಗೂ ಲೈಫ್ ಗಾರ್ಡ್ ಅಡ್ವೆಂಚರ್ಸ್ ಬೋಟ್ ಮೂಲಕ ರಕ್ಷಣೆ ಮಾಡಿದ್ದಾರೆ.

ಲೈಫ್​​ ಗಾರ್ಡ್​ಗಳ ಸಮಯ ಪ್ರಜ್ಞೆಯಿಂದ ಮೂವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಇವರ ಸಾಹಸ ಕಾರ್ಯಕ್ಕೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ರಕ್ಷಣಾ ಕಾರ್ಯಾಚರಣೆಯಲ್ಲಿ ಬೀಚ್ ಮೇಲ್ವಿಚಾರಕ ದತ್ತಾತ್ರೇಯ ಶೆಟ್ಟಿ,ಲೈಫ್​​ ಗಾರ್ಡ್​ಗಳಾದ ಕೇಶವ,ಹನುಮಂತ,ವಿಘ್ನೇಶ್ವರ್, ರಾಮಚಂದ್ರ ಹಾಗೂ ಜಯರಾಮ ಭಾಗಿಯಾಗಿದ್ದರು.

Related Articles

Leave a Reply

Your email address will not be published.

Back to top button