Uncategorized

ಪುರಾತನ ಪಂಚಲೋಹ ವಿಗ್ರಹಗಳ ಕಳ್ಳತನ : 13.70 ಲಕ್ಷ ರೂ. ಮೌಲ್ಯದ ಸ್ವತ್ತುಗಳ ಸಹಿತ ಆರೋಪಿಗಳು ವಶಕ್ಕೆ

ಮಡಿಕೇರಿ : ಪುರಾತನ ಪಂಚಲೋಹದ ಹಾಗೂ ಕಂಚಿನ ವಿಗ್ರಹಗಳು, ಕೃಷಿ ಯಂತ್ರೋಪಕರಣಗಳು ಸೇರಿದಂತೆ ಕಾಫಿ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ಮೂವರು ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ನೀರುಕೊಲ್ಲಿಯ ಲವ, ಮಂಜು ಹಾಗೂ ಮೇಕೇರಿಯ ರೋಹಿತ್ ಬಂಧಿತ ಆರೋಪಿಗಳಾಗಿದ್ದು, ಇವರ ಬಳಿಯಿಂದ ಮಾರುತಿ ವ್ಯಾನ್ ಸಹಿತ ಕಳ್ಳತನ ಮಾಡಿದ್ದ ಸುಮಾರು 13.70 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕರ್ಣಂಗೇರಿ ಗ್ರಾಮದಲ್ಲಿ 2020 ನವೆಂಬರ್ 7 ರಂದು ರಾತ್ರಿ ಆಶಾಕುಮಾರ್ ಎಂಬುವವರ ಮನೆಗೆ ನುಗ್ಗಿದ ಚೋರರು ಸುಮಾರು 10.50 ಲಕ್ಷ ರೂ. ಮೌಲ್ಯದ ಪುರಾತನ ಪಂಚಲೋಹ ಹಾಗೂ ಕಂಚಿನ ವಿಗ್ರಹಗಳನ್ನು ಕದ್ದೊಯ್ದಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಗ್ರಾಮಾಂತರ ಪೊಲೀಸರಿಗೆ ಸುಮಾರು 11 ತಿಂಗಳ ನಂತರ ಆರೋಪಿಗಳು ಮಡಿಕೇರಿ ನಗರದಲ್ಲಿ ಸಿಕ್ಕಿ ಬಿದ್ದಿದ್ದಾರೆ.
ಬಂಧಿತರಿoದ ವಿಗ್ರಹಗಳು ಮಾತ್ರವಲ್ಲದೆ ಕೃತ್ಯಕ್ಕೆ ಬಳಸಿದ್ದ ಮಾರುತಿ ವ್ಯಾನ್ ಸೇರಿದಂತೆ ವಿವಿಧೆಡೆ ಕಳ್ಳತನ ಮಾಡಿದ್ದ ಕೃಷಿ ಯಂತ್ರೋಪಕರಣಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.

Related Articles

Leave a Reply

Your email address will not be published.

Back to top button