Uncategorized
ರಸ್ತೆ ಬದಿಯಲ್ಲೇ ಗೋಹತ್ಯೆ : ಮೂವರು ಆರೋಪಿಗಳು ಪೊಲೀಸ್ ವಶಕ್ಕೆ
ಚಿಕ್ಕಮಗಳೂರು : ಮಾಂಸಕ್ಕಾಗಿ ಹಸುವೊಂದನ್ನು ರಸ್ತೆ ಬದಿಯಲ್ಲೇ ಕಡಿದಿರುವ ಘಟನೆ ಜಿಲ್ಲೆಯ ಎನ್ ಆರ್ ಪುರ ಪಟ್ಟಣದ ಸಮೀಪ ನಡೆದಿದೆ.
ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಟ್ಟಣದ ಹೊರವಲಯದಲ್ಲಿ ರಾತ್ರಿವೇಳೆ ಹಸುವೊಂದನ್ನು ಮಾಂಸಕ್ಕಾಗಿ ಕಡಿದಿದ್ದಾರೆ. ಇದನ್ನು ತಕ್ಷಣ ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರಿಂದ ಗೋಹತ್ಯೆ ಮಾಡಿದವರು ಮಾಂಸವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.
ಬಳಿಕ ಆರೋಪಿಗಳಾದ ಪ್ರಿನ್ಸ್, ಅಭಿಲಾಷ್, ಪ್ರಜ್ವಲ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಗೋಹತ್ಯೆ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.