Uncategorized

ಆರ್​ಎಸ್​ಎಸ್ ಅಂದರೆ ಬಾಂಬ್ ಸ್ಟೋಟ ಮಾಡುವ ಸಂಸ್ಥೆಯಲ್ಲ: ಸಂಸದ ಜಿ ಎಂ ಸಿದ್ದೇಶ್ವರ್

ದಾವಣಗೆರೆ: ಆರ್​ಎಸ್​​ಎಸ್​ ಅಂದರೆ ಬಾಂಬ್ ಸ್ಟೋಟ ಮಾಡುವ ಅಥವಾ ತಾಲಿಬಾನ್ ಚಟುವಟಿಕೆ ನಡೆಸುವ ಸಂಸ್ಥೆಯಲ್ಲ ಎಂದು ಸಂಸದ ಜಿ‌‌. ಎಂ. ಸಿದ್ದೇಶ್ವರ್ ಹೇಳಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆರ್​ಎಸ್​​ಎಸ್​ ಒಂದು ಸೇವಾ ಸಂಸ್ಥೆ. ಸಂಘದಲ್ಲಿ 15 ದಿನ ಹೋಗಿ ಬಂದರೆ ಅಲ್ಲಿನ ಚಟುವಟಿಕೆಗಳ ಬಗ್ಗೆ ಗೊತ್ತಾಗುತ್ತೆ ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು‌.

ಲಾಠಿ ಹಿಡಿಯೋದು ಶಿಸ್ತಿಗಾಗಿ. ಎಲ್ಲಿಯೋ ಬಾಂಬ್ ಸ್ಟೋಟ, ಪ್ರಕೃತಿ ವಿಕೋಪದಂತಹ ಘಟನೆ ನಡೆದರೇ ಆರ್ ಎಸ್ ಎಸ್ ಕಾರ್ಯಕರ್ತರು ಹೋಗಿ ಸಂಕಷ್ಟದಲ್ಲಿದ್ದ ಜನರ ಸೇವೆ ಮಾಡುತ್ತಾರೆ. ಇಂತಹ ಸಂಸ್ಥೆ ಬಗ್ಗೆ ತಿಳುವಳಿಕೆ ಇಲ್ಲದೇ ಮಾತಾಡುವುದು ಸರಿಯಲ್ಲ. ಕೆಲವರು ಆರ್ ಎಸ್ ಎಸ್ ಸಿದ್ಧಾಂತ ಮೆಚ್ಚಿಕೊಂಡವರು ಇರುತ್ತಾರೆ. ಅವರು ಕಷ್ಟಪಟ್ಟು ಓದಿ ಐಎಎಸ್, ಐಪಿಎಸ್ ಸೇರಿದಂತೆ ನಾನಾ ಹುದ್ದೆಗೆ ಹೋಗುತ್ತಾರೆ. ಅಂತವರನ್ನು ಆರ್ ಎಸ್ ಎಸ್ ನವರು ಎನ್ನುವುದು ತಪ್ಪು ಎಂದು ಕುಮಾರಸ್ವಾಮಿಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Related Articles

Leave a Reply

Your email address will not be published.

Back to top button