Uncategorized

ಧಾರವಾಡದ ತಡಕೋಡ ಗ್ರಾಮದ ಅಭಿವೃದ್ಧಿಗೆ ಪಿಡಿಓ ಕಂಟಕ..? : ಪಿಡಿಓ ಬದಲಾವಣೆಗೆ ಪಟ್ಟು

ಧಾರವಾಡ: ನಮ್ಮ ದೇಶ ಗ್ರಾಮಗಳಿಂದ ಕೂಡಿದ ದೇಶವಾಗಿದ್ದು, ಗ್ರಾಮಗಳ ಅಭಿವೃದ್ಧಿಯ ಮೇಲೆ ದೇಶದ ಅಭಿವೃದ್ಧಿ ನಿಂತಿದೆ. ಹಾಗಾಗಿ ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿ ಕಡೆಗೆ ಸಾಗಬೇಕು ಎನ್ನುವ ದೃಷ್ಠಿಯಿಂದ ಹಾಗೂ ಸಕಲ ಸರ್ಕಾರಿ ಯೋಜನೆಗಳು ನಗರ ವಾಸಿಗಳಂತೆ, ಗ್ರಾಮೀಣವಾಸಿಗಳಿಗೂ ಸಿಗಬೇಕು ಅನ್ನುವ ಮಹದಾಶೆಯಿಂದ ಗ್ರಾಮಗಳಿಗೆ ಪಂಚಾಯತಿಯನ್ನು ನೀಡಲಾಗಿದೆ. ಜೊತೆಗೆ ಅದಕ್ಕೆ ಒಬ್ಬರು ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕೂಡಾ ನಿಯೋಜನೆ ಮಾಡಲಾಗಿರುತ್ತದೆ. ಆದರೆ ಧಾರವಾಡ ತಾಲ್ಲೂಕಿನ ತಡಕೋಡ ಗ್ರಾಮದ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೇ ಈಗ ಗ್ರಾಮ ಅಭಿವೃದ್ಧಿಗೆ ಕಂಟಕವಾಗುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ.

ಧಾರವಾಡ ತಾಲೂಕಿನ ತಡಕೊಡ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ಡಿ. ತನ್ವೀರ ಹಾಗೂ ಗ್ರಾಮ ಪಂಚಾಯತಿ ಕೆಲವು ಸಿಬ್ಬಂದಿಗಳ ಮೇಲೆ ಗ್ರಾಮಸ್ಥರು ಸೇರಿದಂತೆ, ಪಂಚಾಯತಿ ಸದಸ್ಯರು ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಒಟ್ಟು 18 ಜನ ಸದಸ್ಯರನ್ನು ಹೊಂದಿರುವ ತಡಕೊಡ ಗ್ರಾಮ ಪಂಚಾಯತಿಗೆ, ಕಳೆದ ನಾಲ್ಕು ತಿಂಗಳ ಹಿಂದೆ ಡಿ.ತನ್ವೀರವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಆಗಮಿಸಿದ್ದು, ಆದರೆ ಪಿಡಿಓ ಗ್ರಾಮ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಸಿಬ್ಬಂದಿಗಳ ಜೊತೆಗೆ ಸೇರಿಕೊಂಡು ಪ್ರತಿಯೊಂದು ಹಂತದಲ್ಲಿ ಅವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ ಪಿಡಿಓ ಅಧಿಕಾರಿಗಳು ತೊಡಗಿಕೊಂಡಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯರೇ ಈಗ ಪಿಡಿಓ ವಿರುದ್ಧ ದಾಖಲೆ ಹಿಡಿದು ಆರೋಪ ಮಾಡುತ್ತಿದ್ದಾರೆ.‌

ಸದಸ್ಯರ ಅಹೋರಾತ್ರಿ ಧರಣಿ

ತಡಕೊಡ ಗ್ರಾಮ ಪಂಚಾಯತಿ ಪಿಡಿಓ ಡಿ.ತನ್ವೀರ ಕಾರ್ಯ ವೈಖರಿಯಿಂದ ಬೇಸತ್ತ ಪಂಚಾಯತಿಯ 16 ಜನ ಸದಸ್ಯರು ಕಳೆದ ಅಕ್ಟೋಬರ್ 1 ರಂದು ಅಹೋರಾತ್ರಿ ಧರಣಿ ನಡೆಸಿದ್ದರು. ಬಳಿಕ ಅ.2 ರಂದು ಪಂಚಾಯತಿಗೆ ಆಗಮಿಸಿದ್ದ ಪಿಡಿಓ ಅಂದು ಸದಸ್ಯರೊಂದಿಗೆ ಸಭೆ ನಡೆಸಿ, ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದರಂತೆ. ಈ ವೇಳೆ ಅವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಪಂಚಾಯತಿ ಸಿಬ್ಬಂದಿಯನ್ನು ತೆಗೆದು ಹಾಕುವುದಾಗಿ ಠರಾವು ಪಾಸು ಮಾಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪಿಡಿಓ ಅಧಿಕಾರಿಗಳು ಪಂಚಾಯತಿ ಸದಸ್ಉರೊಂದಿಗೆ ಸಭೆ ನಡೆಸುವು ಸಂದರ್ಭದಲ್ಲಿ, ಈ ಹಿಂದಿನ ಸಭೆಯಲ್ಲಿ ಪಾಸಾದ ಠರಾವು ಪ್ರತಿ ಕೂಡಾ ಪಿಡಿಓ ಹಾಗೂ ಸಿಬ್ಬಂದಿಗಳು ಸದಸ್ಯರಿಗೆ ನೀಡುವುದಿಲ್ಲವಂತೆ. ಒಂದು ರೀತಿ ಪಂಚಾಯತಿಯಲ್ಲಿ ಹಿಟ್ಲರ್ ಆಡಳಿತವನ್ನು ಪಿಡಿಓ ಡಿ ತನ್ವೀರವರು ನಡೆಸುತ್ತಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಸಂಗ್ರಹವಾದ ತೆರಿಗೆ ಹಣದ ಕುರಿತು ಮಾಹಿತಿ ನೀಡುತ್ತಿಲ್ಲ. ಹಾಗಾಗಿ ಗ್ರಾಮ ಪಂಚಾಯತಿ ಪಿಡಿಓ ಅವರನ್ನು ಈ ಕೂಡಲೇ ಜಿಲ್ಲಾ ಪಂಚಾಯತಿ‌ ಸಿಇಓ ಡಾ.ಸುಶೀಲಾರವರು ವರ್ಗಾವಣೆ ಮಾಡಬೇಕು ಎಂದು ಪಂಚಾಯತಿ ಸದಸ್ಯರಾದ ಈರಣ್ಣಾ ಬಾರಕೇರವರು ಒತ್ತಾಯ ಮಾಡಿದ್ದಾರೆ.

ಗ್ರಾಮಸ್ಥರಿಂದಲ್ಲೂ ಪಿಡಿಓ ವರ್ಗಾವಣೆಗೆ ಒತ್ತಾಯ:

ಈಗಾಗಲೇ ಗ್ರಾಮ ಪಂಚಾಯತಿ‌ ಸದಸ್ಯರಿಂದ‌ ಅವ್ಯವಹಾರ ಆರೋಪಗಳನ್ನು ಎದುರಿಸುತ್ತಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಡಿ ತನ್ವೀರರವರ ವಿರುದ್ಧ ಗ್ರಾಮಸ್ಥರು ಕೂಡಾ ಬೇಸರಗೊಂಡಿದ್ದಾರೆ. ಗ್ರಾಮದ ಅಭಿವೃದ್ಧಿ ಅಧಿಕಾರಿಯಾಗಿ ನಿಯೋಜನೆಗೊಂಡಿರುವ ಡಿ ತನ್ವೀರವರು ಗ್ರಾಮ ಪಂಚಾಯತಿಯಲ್ಲಿ ಹೆಚ್ಚು ಇರುವುದಿಲ್ಲ. ಯಾವುದೇ ಸಮಯದಲ್ಲಿ ಹೋದರು ಅವರು ಗ್ರಾಮಸ್ಥರಿಗೆ ಸಿಗುತ್ತಿಲ್ಲ. ನರೇಗಾ ಯೋಜನೆಯಲ್ಲಿ ದುಡಿಮೆ ಮಾಡಿದರನ್ನು ಬಿಟ್ಟು, ನರೇಗಾ ಕಾರ್ಯ ಮಾಡದೇ ಇರುವವರ ಖಾತೆಗೆ ಹಣವನ್ನು ಜಮಾವಣೆ ಮಾಡಲಾಗುತ್ತಿದೆ. ಗ್ರಾಮದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳ ಖಾತೆಗೆ ನರೇಗಾ ಯೋಜನೆಯ ಹಣ ಜಮೆ ಮಾಡಲಾಗುತ್ತಿದೆ. ಟ್ಯಾಕ್ಸ್ ವಿಚಾರದಲ್ಲಿ ವರ್ಷಕೊಮ್ಮೆ ಸಂಗ್ರಹ ಮಾಡುತ್ತಾರೆ ಆದರೆ ಇಲ್ಲಿ. ಅವರ ಮನಸ್ಸಿಗೆ ಬಂದಾ, ವರ್ಷಕ್ಕೆ ಹೋಗಿ ಎರಡು ತಿಂಗಳು ಮೂರು ತಿಂಗಳಿಗೆ ಮನೆ ಪಟ್ಟಿ‌‌ ಸಂಗ್ರಹ‌ ಮಾಡುತ್ತಿದ್ದಾರೆ. ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುತ್ತಿಲ್ಲ ಅದರಲ್ಲೂ ಅವ್ಯವಹಾರ ಮಾಡುತ್ತಿದ್ದಾರೆ. ಗ್ರಾಮಸ್ಥರಿಗೆ ಇ – ಉತ್ತರ ತೆಗೆದುಕೊಳ್ಳಲು ಹಣ ಸಂಗ್ರಹ‌ ಮಾಡುತ್ತಿದ್ದಾರೆ‌. ಆದರೆ ಅದರ ಕುರಿತು ಯಾವುದೇ ರಶೀದಿ ನೀಡುತ್ತಿಲ್ಲ. ಇದರ ಕುರಿತು ಸದಸ್ಯರ ಗಮನಕ್ಕೆ ತಂದರೂ ಅವರಿಗೂ ಸಹ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ಗಂಭೀರ ಆರೋಗಳು ಕೇಳಿ ಬರುತ್ತುವೆ. ಹಾಗಾಗಿ ಗ್ರಾಮ ಅಭಿವೃದ್ಧಿಗೆ ಒತ್ತ ನೀಡದ ಈ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ನಾವೇ ಧರಣಿಗೆ ಕುಳಿತುಕೊಳ್ಳುತ್ತೇವೆ ಎನ್ನುತ್ತಿದ್ದಾರೆ ಗ್ರಾಮಸ್ಥರು.

ಒಟ್ಟಿನಲ್ಲಿ ಗ್ರಾಮಸ್ಥರ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕಾದ ಪಿಡಿಓ ವಿರುದ್ಧವೇ ಈಗ ಗಂಭೀರ ಆರೋಪಗಳು‌ ಕೇಳಿ ಬಂದಿವೆ. ಈಗಾಗಲೇ ಗ್ರಾಮಸ್ಥರು ಸೇರಿದಂತೆ ಪಂಚಾಯತಿ ಸದಸ್ಯರು, ಧಾರವಾಡ ಜಿಲ್ಲಾ ಪಂಚಾಯತಿ ಸಿಇಓ ಡಾ.ಸುಶೀಲಾ ಅವರಿಗೆ ಮನವಿ ಕೂಡಾ ನೀಡಿದ್ದಾರಂತೆ. ಆದರೆ ಈಗ ಜಿಲ್ಲಾ ಪಂಚಾಯತಿ ಸಿಇಓ ಅಧಿಕಾರಿವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ‌.

Related Articles

Leave a Reply

Your email address will not be published. Required fields are marked *

Back to top button