Uncategorized

T20 World Cup: ಬಾಂಗ್ಲಾಕ್ಕೆ ಸೋಲುಣಿಸಿದ ಶ್ರೀಲಂಕಾ

ಶಾರ್ಜಾ: ಚರಿತ್ ಅಸಲಂಕಾ (80*) ಮತ್ತು ಭಾನುಕಾ ರಾಜಪಕ್ಸಾ (53) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟಿ20 ಸೂಪರ್ 12 ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶದ ವಿರುದ್ಧ 5 ವಿಕೆಟ್ ಅಂತರದಲ್ಲಿ ಜಯ ಗಳಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಲಂಕಾ ಪಡೆ ಬಾಂಗ್ಲಾದೇಶವನ್ನು 171 ರನ್ ಗೆ ಕಟ್ಟಿ ಹಾಕಿತು. ಬಾಂಗ್ಲಾ ಪರ ಆರಂಭಿಕ ಆಟಗಾರ ಮೊಹಮ್ಮದ್ ನಯೀಂ (62) ಮತ್ತು ಮುಷ್ಫಿಕರ್ ರಹೀಂ (57) ಅವರ ಅರ್ಧ ಶತಕ‌ ಸವಾಲಿನ ಮೊತ್ತ ದಾಖಲಿಸಲು ನೆರವಾಯಿತು.

172 ರನ್ ಗುರಿಹೊತ್ತ ಶ್ರೀಲಂಕಾದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಆಟಗಾರ ಕುಶಲ್ ಪೆರೇರಾ ಕೇವಲ‌ 1 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆದರೆ ಚರಿತ್ ಅಸಲಂಕಾ 49 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ ಅಜೇಯ 80 ರನ್ ಗಳಿಸಿ ಜಯದ ರೂವಾರಿ ಎನಿಸಿದರು.

ಒಂದು ಹಂತದಲ್ಲಿ ಲಂಕಾ ತಂಡಕ್ಕೆ 8 ಓವರ್ ಗಳಲ್ಲಿ 80 ರನ್ ಗಳಿಸಬೇಕಾಗಿತ್ತು. ಆದರೆ ಭಾನುಕಾ ರಾಜಪಕ್ಸಾ 31 ಎಸೆತಗಳನ್ನೆದುರಿಸಿ 3 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಮಿಂಚಿನ ವೇಗದಲ್ಲಿ 53ರನ್ ಗಳಿಸಿ ಜಯದ ಹಾದಿಯನ್ನು ಸುಗಮಗೊಳಿಸಿದರು.

Related Articles

Leave a Reply

Your email address will not be published.

Back to top button