Uncategorized

ಇಂಡಿಯಾ – ಪಾಕ್ ಪಂದ್ಯಕ್ಕೆ ಶುಭ ಹಾರೈಸಿದ ಧಾರವಾಡ ವಿದ್ಯಾರ್ಥಿಗಳು

ಧಾರವಾಡ : ತೀವ್ರ ಕುತೂಹಲ ಕೆರಳಿಸಿರುವ ಇಂಡೋ -ಪಾಕ್ ಕ್ರಿಕೆಟ್ ಪಂದ್ಯಾವಳಿಗೆ ಈಗಾಗಲೇ ದೇಶ ಸೇರಿದಂತೆ ಜಗತ್ತಿನೆಲ್ಲೆಡೆ ಅಭಿಮಾನಿಗಳು ಅವರದೇ ಆದ ರೀತಿಯಲ್ಲಿ ವಿಶ್ ಮಾಡುತ್ತಿದ್ದು, ಪೇಡಾನಗರಿ ಧಾರವಾಡದಲ್ಲಿಯು ವಿದ್ಯಾರ್ಥಿಗಳು ಗೆದ್ದು ಬಾ ಭಾರತ ಎಂದು ವಿಶ್ ಮಾಡುವುದರ ಮೂಲಕ ಭಾರತಕ್ಕೆ ತಂಡಕ್ಕೆ ಶುಭಕೋರಿದ್ದಾರೆ.

ನಗರದ ಪವನ್ ಆಂಗ್ಲ ಮಾಧ್ಯಮ ಸ್ಕೂಲ್ ನ ವಿದ್ಯಾರ್ಥಿಗಳು ಕ್ರಿಕೆಟ್ ಸಾಮಗ್ರಿಗಳನ್ನು ಹಿಡಿದುಕೊಂಡು, ಪ್ರಾಕ್ಟೀಸ್ ಮಾಡುವ ಸ್ಥಳದಿಂದಲೇ ರಾಷ್ಟ್ರ ಧ್ವಜವನ್ನು ಹಿಡಿದು ಗೆದ್ದು ಬಾ ಭಾರತ, ಆಲ್ ದ ಬೆಸ್ಟ್ ಇಂಡಿಯಾ ಎಂದು ಜಯ ಘೋಷಗಳನ್ನು ಕೂಗುವದರ ಮೂಲಕ ಪಾಕಿಸ್ತಾನದ ವಿರುದ್ಧ ಗೆಲುವು ನಿಮ್ಮದಾಗಲಿ ಎಂದು ವಿದ್ಯಾರ್ಥಿಗಳು ಭಾರತದ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಭಾರತ-ಪಾಕಿಸ್ತಾನ ನಡುವೆ ಯಾವುದೇ ಪಂದ್ಯ ನಡೆಯದೆ ಇರುವ ಕಾರಣದಿಂದಾಗಿ, ಪ್ರಸ್ತುತ ನಡೆಯುತ್ತಿರುವ ಟಿ-20 ವರ್ಲ್ಡ್ ಕಪ್ ನಲ್ಲಿ ಇಂಡೋ ಪಾಕ್ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲದೆ ಇಂದು ಮುಖಾಮುಖಿಯಾಗಲಿರುವ ಭಾರತ ಪಾಕಿಸ್ತಾನ ಪಂದ್ಯ ವೀಕ್ಷಣೆಗೆ ಪೇಡಾನಗರಿ ಧಾರವಾಡದ ಯುವ ಸಮುದಾಯ ಪಂದ್ಯ ಆರಂಭಕ್ಕೆ ಎದುರು ನೋಡುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button