Uncategorized

T20 World Cup: ಬಾಗಲಕೋಟೆ: ಪಾಕ್‌ ವಿರುದ್ಧ ಭಾರತದ ಗೆಲುವಿಗೆ ಅಭಿಮಾನಿಗಳಿಂದ ವಿಶೇಷ ಪೂಜೆ!

ಬಾಗಲಕೋಟೆ: ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನ ಭಾರತ ಮಧ್ಯೆ ಹೈವೋಲ್ಟೇಜ್ ಹಣಾಹಣಿಯಿದ್ದು. ದೇಶದಾದ್ಯಂತ ಭಾರತ ಗೆದ್ದು ಬರಲಿ ಎನ್ನುವ ಜೈ ಘೋಷಣೆ ಪ್ರಾರ್ಥನೆ ಪುರಸ್ಕಾರ ನಡೆದಿದೆ. ಮುಳುಗಡಿ ನಗರ ಬಾಗಲಕೋಟೆಯಲ್ಲೂ ಇಂಡಿಯಾ ಗೆದ್ದು ಬರಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.

ಬಾಗಲಕೋಟೆ ನಗರದಲ್ಲಿರುವ ಗಣೇಶ್ ದೇಗುಲದಲ್ಲಿ ಕ್ರಿಕೆಟ್ ಅಭಿಮಾನಿಗಳು ಇಂಡಿಯಾ ಗೆಲುವಿಗಾಗಿ ಪ್ರಾರ್ಥಿಸಿದರು.ಅತ್ತ ಕ್ರೀಡಾಂಗಣದಲ್ಲಿ ಕ್ರಿಕೇಟ್ ಆಟಗಾರರು ಚಿನ್ನರು ಗೆದ್ದು ಬಾ ಇಂಡಿಯಾ ಎಂದು ಶುಭ ಹಾರೈಸಿದ್ದಾರೆ. ಪಂದ್ಯಕ್ಕೆ ಸಂಜೆ 7-30ಕ್ಕೆ ಆರಂಭವಾಗಲಿದ್ದು. ಅಭಿಮಾನಿಗಳು ಹೈವೋಲ್ಟೇಜ್ ಪಂದ್ಯ ನೋಡಲು ಕಾತುರರಾಗಿದ್ದಾರೆ.

ಭಾರತ ಪಾಕಿಸ್ತಾನ ಮಧ್ಯೆ ನಡೆಯೋ ಕ್ರಿಕೆಟ್ ಪಂದ್ಯ ಯುದ್ದದ ರೀತಿಯಲ್ಲೇ ನೋಡಲಾಗುತ್ತಿದೆ. ಉಭಯ ತಂಡಗಳ ಆಟಗಾರರಲ್ಲೂ ಗೆಲುವಿಗಾಗಿ ಸೆಣಸಾಟ ನಡೆಸುತ್ತಾರೆ. ಇಡೀ ದೇಶದಲ್ಲೇ ಇಂಡಿಯಾ ಪಾಕಿಸ್ತಾನ ವಿರುದ್ಧ ಗೆದ್ದು ಬರಲಿ ಎಂದು ಕೋಟ್ಯಾಂತರ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಅದೇ ರೀತಿ ಬಾಗಲಕೋಟೆ ಜಿಲ್ಲೆಯಾದ್ಯಂತ ಕ್ರಿಕೆಟ್ ಅಭಿಮಾನಿಗಳು ಇಂಡಿಯಾ ಗೆದ್ದು ಬರಲಿ ಎಂದು ಪ್ರಾರ್ಥನೆ, ಪುರಸ್ಕಾರದ ಮೂಲಕ ಶುಭ ಹಾರೈಕೆಗಳು ಹರಿದು ಬರುತ್ತಿವೆ.

Related Articles

Leave a Reply

Your email address will not be published.

Back to top button