Uncategorized
ಧಾರವಾಡ: ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
ಧಾರವಾಡ: ಸಾರ್ವಜನಿಕರಿಗೆ ತಿದ್ದಿ ಬುದ್ದಿ ಹೇಳಬೇಕಾದ ಗ್ರಾಮ ಪಂಚಾಯತಿ ಅಧ್ಯಕ್ಷೆಯೊಬ್ಬರು ವಿಷ ಸೇವಿಸಿ ಮನೆಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಧಾರವಾಡ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ.
ಕೋಟೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಾ ದೊಡ್ಡಮನಿ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ಕೌಟುಂಬಿಕ ಸಮಸ್ಯೆಯಿಂದಾಗಿ ಶೋಭಾರವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮನೆಯಲ್ಲೇ ವಿಷ ಸೇವನೆ ಮಾಡಿದ್ದು, ಕೂಡಲ್ಲೇ ಗಮನಿಸಿದ ಕುಟುಂಬ ಸಂಭಂಧಿ ಹಾಗೂ ಅಕ್ಕಪಕ್ಕದವರು ಶೋಭಾರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದ್ದು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಘಟನೆಯ ಮಾಹಿತಿ ಮೇರೆಗೆ ಧಾರವಾಡ ಗರಗ ಠಾಣೆಯ ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಅಧ್ಯಕ್ಷರ ಆತ್ಮಹತ್ಯೆಗೆ ಯತ್ನದ ಹಿಂದಿನ ನೀಜ ಕಾರಣ ಏನೂ ಎಂಬುವುದು ತಿಳಿದು ಬರಬೇಕಾಗಿದೆ.