Uncategorized

ಪರೀಕ್ಷೆಗೆ ಹೆದರಿ ಪಿಎಚ್​ಡಿ ವಿದ್ಯಾರ್ಥಿನಿ ಆತ್ಮಹತ್ಯೆ

ಮೈಸೂರು: ಪರೀಕ್ಷೆ ಒತ್ತಡಕ್ಕೆ ಹೆದರಿ ಪಿಎಚ್​ಡಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಸರಸ್ವತಿಪುರಂನಲ್ಲಿ ಈ ಘಟನೆ ನಡೆದಿದ್ದು, ಪರೀಕ್ಷೆ ಒತ್ತಡವೇ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದ್ದು, ರಶ್ಮಿ (29) ಮೃತ ವಿದ್ಯಾರ್ಥಿನಿ. ಚಾಮರಾಜನಗರ ಮೂಲದ ರಶ್ಮಿ ಸರಸ್ವತಿಪುರಂ 9ನೇ ಮೇನ್​ನಲ್ಲಿರುವ ಪಿಜಿಯಲ್ಲಿ ವಾಸ್ತವ್ಯ ಹೂಡಿದ್ದರು.

ಎಂಎಸ್ಸಿ ಕೆಮಿಸ್ಟ್ರಿ ಮುಗಿಸಿ ಪಿಎಚ್ ಡಿ ಮಾಡುತ್ತಿದ್ದ ರಶ್ಮಿಯು ಜೆಎಸ್​ಎಸ್​ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಮಿಸ್ಟ್ರಿ ವಿಚಾರದಲ್ಲಿ ಪಿಎಚ್​ಡಿ ಮಾಡುತ್ತಿದ್ದರು.

ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿರಲಿಲ್ಲ ಎಂದು ಹೇಳಲಾಗಿದ್ದು, ಇದರಿಂದ ಒತ್ತಡಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಸಂಭಂದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published.

Back to top button