Student suicide: ಬನಹಟ್ಟಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
ಬಾಗಲಕೋಟೆ: ಪಾಲಕರು ಮಗಳಿಗೆ ಬುದ್ಧಿವಾದ ಹೇಳುವ ಸಂದರ್ಭದಲ್ಲಿ ಸ್ವಲ್ಪ ಸಿಟ್ಟು ಮಾಡಿಕೊಂಡಿದ್ದರಿಂದ ಬನಹಟ್ಟಿಯ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಸೌಂದರ್ಯ ಸಂಜು ಗೊಲಭಾವಿ(18) ಆತ್ಮಹತ್ಯೆ ಮಾಡಿಕೊಂಡ ಘಟನೆ ಬನಹಟ್ಟಿಯ ಪೊಲೀಸ್ ಠಾಣೆಯ ವ್ಯಾಪ್ತಿಯುಲ್ಲಿ ನಡೆದಿದೆ.
ಬನಹಟ್ಟಿಯ ಅಶೋಕ ಕಾಲನಿಯ ನಿವಾಸಿ ಸೌಂದರ್ಯ ಸಂಜು ಗೊಲಬಾಂವಿ ವಯಸ್ಸು 18 ಮೃತ ವಿದ್ಯಾರ್ಥಿನಿಯಾಗಿದ್ದು, ಮೃತಳು ಬನಹಟ್ಟಿಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಸೋಮವಾರ ಸಂಜೆ ಮನೆಯಲ್ಲಿ ಮಗಳೊಂದಿಗೆ ಜಗಳವಾಗಿ ಅಭ್ಯಾಸ ಮಾಡದೆ ಊರಲ್ಲಿ ತಿರುಗಾಡುವದು ಮಾಡುತ್ತಿದ್ದಿಯಾ, ಕಾಲಮಾನ ಸೂಕ್ಷ್ಮವಾಗಿದೆ ಬರಿ ಊರಲ್ಲಿ ತಿರುಗಾಡುತ್ತಿಯಾ ಎಂದು ಸಿಟ್ಟು ಮಾಡಿಕೊಂಡು ತಂದೆ ತಾಯಿ ಬುದ್ದಿವಾದ ಹೇಳಿದ್ದದ್ದರು.
ಅದನ್ನೇ ಸೌಂದರ್ಯ ಮನಸ್ಸಿಗೆ ಹಚ್ಚಿಕೊಂಡು ಮಾನಸಿಕವಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಲ್ಲಿದ್ದ ಬಳೆಚೂರಿ(ಮಿಂಚಿನ)ನ ಪುಡಿಯನ್ನು ನೀರಿನಲ್ಲಿ ಹಾಕಿಕೊಂಡು ಕುಡಿದು ಮೃತಪಟ್ಟಿದ್ದು ಇರುತ್ತದೆ. ಹೊರತು ಮರಣದಲ್ಲಿ ಬೇರೆ ಯಾವುದೇ ಸಂಶಯವಿಲ್ಲಾ ಎಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಬನಹಟ್ಟಿ ಪೋಲಿಸ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.