Uncategorized

ಸೋಲಾಪುರ -ಹಾಸನ ನಡುವೆ ಸಂಚರಿಸುವ ರೈಲು ನಾಲ್ಕು ದಿನ ಸ್ಥಗಿತ

ಕಲಬುರಗಿ: ಸೋಲಾಪುರ -ಹಾಸನ ಹಾಗೂ ಹಾಸನ -ಸೋಲಾಪುರ ಸಂಚರಿಸುವ ರೈಲು ಓಡಾಟವನ್ನು ನಾಲ್ಕು ದಿನಗಳ ಮಟ್ಟಿಗೆ ಸಂಚಾರ ರದ್ದು ಪಡಿಸಲಾಗಿದೆ.

ಸೋಲಾಪುರದಿಂದ ಹಾಸನಕ್ಕೆ ತೆರಳುವ ಟ್ರೈನ್ ಸಂಖ್ಯೆ 01311 ಸೋಲಾಪುರ-ಹಾಸನ ಎಕ್ಸ್‌ಪ್ರೆಸ್ ರೈಲು ನವೆಂಬರ್16 ರಿಂದ 19ರವರೆಗೆ ಸಂಚಾರ ರದ್ದು ಪಡಿಸಲಾಗಿದೆ. ಅದರಂತೆ ಹಾಸನದಿಂದ ಸೋಲಾಪುರಕ್ಕೆ ತೆರಳುವ ಟ್ರೈನ್ ಸಂಖ್ಯೆ 01312 ಹಾಸನ-ಸೋಲಾಪುರ ರೈಲು ನವೆಂಬರ್ 17 ರಿಂದ 20 ರವರೆಗೆ ಸಂಚಾರ ರದ್ದು ಮಾಡಲಾಗಿದೆ.

ಯಲಹಂಕ ವಿಭಾಗದಲ್ಲಿ ರೈಲುಹಳಿ ಡಬ್ಲಿಂಗ್ ಕಾರ್ಯ ನಿಮಿತ್ಯ ಮುಂದಿನ ತಿಂಗಳು (ನವೆಂಬರ್) ತಿಂಗಳಿನಲ್ಲಿ ನಾಲ್ಕು ದಿನ ಎರಡು ರೈಲು ಓಡಾಡುವದಿಲ್ಲ ಅಂತ ಕಲಬುರಗಿ ರೈಲ್ವೆ ಅಧಿಕಾರಿಯಿಂದ ಮಾಹಿತಿ ನೀಡಿದ್ದಾರೆ.

ಸೋಲಾಪುರ, ಕಲಬುರಗಿ, ಯಾದಗಿರಿ, ರಾಯಚೂರ ಸೇರಿದಂತೆ ಈ ಭಾಗದ ಜನರು ರಾಜ್ಯಧಾನಿ ಬೆಂಗಳೂರು ಸಿಟಿಗೆ ತೆರಳಲು ಇದೆ ರೈಲು ಉಪಯೋಗಿಸುತ್ತಿದ್ದಾರೆ. ನಾಲ್ಕು ದಿನಗಳ ಮಟ್ಟಿಗೆ ಪ್ರಯಾಣಿಕರು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ…

Related Articles

Leave a Reply

Your email address will not be published.

Back to top button