Uncategorized
ಮಾಜಿ ಶಾಸಕಿ ಮನೆಗೆ ಎಂಟ್ರಿ ಕೊಟ್ಟ ಹಾವು: ನಾಗರಹಾವು ನೋಡಿ ಕುಟುಂಬಸ್ಥರಲ್ಲಿ ಆತಂಕ
ಧಾರವಾಡ: ಗ್ರಾಮೀಣ ಬಿಜೆಪಿ ಮಾಜಿ ಶಾಸಕಿ ಸೀಮಾ ಮಸೂತಿಯವರ ಮನೆಯಲ್ಲಿ ಇಂದು ನಾಗರ ಹಾವು ಪ್ರತ್ಯಕ್ಷವಾಗಿ ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದ ಘಟನೆ ನಡೆದಿದೆ.
ನಗರದ ಮುರುಘಾಮಠ ಸವದತ್ತಿ ರಾಜ್ಯ ಹೆದ್ದಾರಿಯಲ್ಲಿರು ಮಾಜಿ ಶಾಸಕಿ ಸೀಮಾ ಮಸೂತಿ ಮನೆಯಲ್ಲಿ ನಾಗರ ಹಾವು ಕಾಣಿಸಿಕೊಂಡಿತ್ತು. ಇನ್ನೂ ಈ ನಾಗರಹಾವು ಮನೆಯ ಪಕ್ಕದಲ್ಲಿ ಜಮೀನುಗಳು ಇದ್ದು, ಅಲ್ಲಿಂದ ಇಂದು ಬೆಳಗಿನ ಜಾವ ಮನೆಯ ಒಳಗೆ ಪ್ರವೇಶ ಮಾಡಿದೆ ಎಂದು ಹೇಳಲಾಗುತ್ತಿದೆ.
ಹಾವು ಕಂಡ ಕೂಡಲೇ ಹೊರಹಾಕಲು ಕುಟುಂಬಸ್ಥರು ಪ್ರತ್ನಿಸಿದ್ದಾರೆ. ಆದರೆ ಹಾವು ಒಂದು ರೂಮಿಂದ್ ಮತ್ತೊಂದು ರೂಮಿಗೆ ತೆರಳುತ್ತಿದ್ದು, ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸ್ನೇಕ್ ತಿಪ್ಪಣ್ಣಾ ಕೋಟಗಿಯವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ತಿಪ್ಪಣ್ಣ ಕೋಟಗಿ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಸದ್ಯ ಈಗ ಹಾವು ಹಿಡಿದ ಮೇಲೆ ಮಾಜಿ ಶಾಸಕಿ ಸೀಮಾ ಮಸೂತಿಯವರ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.