Uncategorized
Kitchen Room: ಜಿಡ್ಡಿನಂಶ ತೆಗೆಯುವುದು ಹೇಗೆ?
ನೀವು ಎಷ್ಟೇ ತಿಕ್ಕಿ ತೊಳೆದರೂ, ಯಾವುದೇ ಸೋಪು ಬಳಸಿದರೂ ಅಡುಗೆ ಮನೆಯಲ್ಲಿ ಜಿಡ್ಡಿನಂಶ ದೂರವಾಗುವುದಿಲ್ಲ. ಇದನ್ನು ತೊಲಗಿಸುವ ಕೆಲವು ಟಿಪ್ಸ್ ಗಳು ಇಲ್ಲಿವೆ ಕೇಳಿ.
ಅಡುಗೆ ಮನೆಯನ್ನು ನಿತ್ಯ ಸ್ವಚ್ಛಗೊಳಿಸಿ. ಪ್ರತಿಬಾರಿ ಅಡುಗೆಯಾದ ಬಳಿಕ ಎರಡು ಹನಿ ವಿಮ್ ನಿಂದ ಮೇಲ್ಭಾಗವನ್ನು ಸ್ವಚ್ಛಗೊಳಿಸಿ. ಅಡುಗೆ ಮನೆಯಲ್ಲಿ ತೆರೆದ ಕ್ಯಾಬಿನೆಟ್ ಇದ್ದರೆ ಅಲ್ಲಿ ಧೂಳು ಕಸ ನಿಲ್ಲುವುದು ಹೆಚ್ಚು. ಹಾಗಾಗಿ ಅಲ್ಲಿರುವ ಡಬ್ಬಿಗಳನ್ನು ವಾರಕ್ಕೊಮ್ಮೆಯಾದರೂ ಒಣಗಿದ ಬಟ್ಟೆಯಿಂದ ಒರೆಸಿ ಮತ್ತೆ ಅದೇ ಸ್ಥಾನದಲ್ಲಿಡಿ.
ವಾರಂತ್ಯದಲ್ಲಿ ಸೋಡಾ ವಾಷಿಂಗ್ ಪೌಡರ್ ಹಾಗೂ ವಿನೆಗರ್ ಅನ್ನು ಬೆರೆಸಿಕೊಂಡು ಕ್ಯಾಬಿನೆಟ್ ಹಾಗೂ ಇತರ ರಾಕ್ ಗಳನ್ನು ಸ್ವಚ್ಛಗೊಳಿಸಿ. ಇದರಿಂದ ಕೊಲೆ ಅಲ್ಲೇ ಸಂಗ್ರಹವಾಗುವುದನ್ನು ತಪ್ಪಿಸಬಹುದು.
ಹಟಮಾರಿ ಜಿಡ್ಡಿನ ನಿವಾರಣೆಗೆ ವಿನೆಗರ್ ಹಾಗೂ ನಿಂಬೆರಸದ ಮಿಶ್ರಣವನ್ನು ಆ ಜಾಗಕ್ಕೆ ಸ್ಪ್ರೇ ಮಾಡಿ ಬಿಡಿ. 30 ನಿಮಿಷದ ಬಳಿಕ ಒಣಗಿದ ಬಟ್ಟೆಯಿಂದ ಗಟ್ಟಿಯಾಗಿ ಉಜ್ಜಿ. ಇದರಿಂದ ಹೆಚ್ಚಿನ ಕಲೆಗಳು ದೂರವಾಗುತ್ತವೆ.