Uncategorized

ಕೊಡಗು; ಸರಳ ದಸರಾ ಆಚರಣೆಗೆ ಸಲಹೆ

ಮಡಿಕೇರಿ : ಕಳೆದ ಬಾರಿಯಂತೆ ಈ ಬಾರಿಯೂ ಸರಳವಾಗಿ ದಸರಾ ಆಚರಣೆ ಮಾಡಬೇಕು, ಸರಕಾರದ ಸೂಚನೆಯಂತೆ ಇತಿ, ಮಿತಿಯೊಳಗೆ ಕಾರ್ಯಕ್ರಮ ಆಯೋಜನೆ ಮಾಡುವಂತೆ ಶಾಸಕರೂ, ದಸರಾ ಸಮಿತಿ ಪೋಷಕರೂ ಆಗಿರುವ ಅಪ್ಪಚ್ಚು ರಂಜನ್ ಹೇಳಿದ್ದಾರೆ.

ಶಾಸಕರ ಕಚೇರಿಯಲ್ಲಿಂದು ಶಾಸಕರನ್ನು ಭೇಟಿಯಾದ ದಸರಾ ಸಮಿತಿ ಪದಾಧಿಕಾರಿಗಳು, ನಿಯಮಗಳನ್ನು ಕೊಂಚ ಸಡಿಲಿಸುವದರೊಂದಿಗೆ ಕನಿಷ್ಟ ರೂ.೫೦ಲಕ್ಷ ಅನುದಾನ ಒದಗಿಸಿಕೊಡುವಂತೆ ಮನವಿ ಮಾಡಿದರು. ಸರಳವಾಗಿ ಕೆಲವೊಂದು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಬಗ್ಗೆ ಶಾಸಕರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸರಕಾರದ ಮಾರ್ಗಸೂಚಿಯಂತೆ ರೂ.೨೫ ಲಕ್ಷ ಅನುದಾನ ದಸರಾ ಕಾರ್ಯಕ್ರಮಗಳಿಗೆ ನೀಡಲಾಗುವದು, ೨೫ ಲಕ್ಷಕ್ಕೆ ಸೀಮಿತವಾಗಿ ಕಾರ್ಯಕ್ರಮ ಆಯೋಜನೆ ಮಾಡಿಕೊಳ್ಳಿ, ಕೋವಿಡ್ ಹರಡದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಹೆಚ್ಚು ಜನ ಸೇರದಂತೆ ಕಾರ್ಯಕ್ರಮ ನಡೆಸುವಂತೆ ಹೇಳಿದರು.

ದಶಮಂಟಪಗಳಿಗೆ ಒಂದು ಟ್ರ್ಯಾಕ್ಟರ್ ಬಳಸಲಿದ್ದು, ಧ್ವನಿವರ್ಧಕ ಅಳವಡಿಸಲು ಇನ್ನೊಂದು ಟ್ರ್ಯಾಕ್ಟರ್ ಬಳಸಲು, ಬನ್ನಿ ಕಡಿಯಲು ಮರುದಿನ ಬೆಳಗ್ಗಿನ ಜಾವದವರೆಗೆ ಅವಕಾಶ ಕಲ್ಪಿಸಲು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಕೊಡಿಸುವಂತೆ ಇದೇ ಸಂದರ್ಭದಲ್ಲಿ ಪದಾಧಿಕಾರಿಗಳು ಕೋರಿದರು. ಅನುಮತಿ ಕೊಡಿಸುವದಾಗಿ ಶಾಸಕರು ಭರವಸೆ ನೀಡಿದರು.

ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್.ರಮೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಶ್ವೇತಾ ಪ್ರಶಾಂತ್, ಉಪಾಧ್ಯಕ್ಷರುಗಳಾದ ಟಿ.ಹೆಚ್.ಉದಯಕುಮಾರ್, ಡಿಶು,ನೆರವಂಡ ಜೀವನ್, ಸಹ ಕಾರ್ಯದರ್ಶಿ ಉಷಾ ಕಾವೇರಪ್ಪ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಬಿ.ಎಂ.ಹರೀಶ್, ಕ್ರೀಡಾ ಸಮಿತಿ ಅಧ್ಯಕ್ಷ ಮನು ರಾಜೀವ್, ಕವಿಗೋಷ್ಠಿ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್, ದಶ ಮಂಟಪ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ನಗರ ಸಭಾ ಸದಸ್ಯರುಗಳಾದ ಸವಿತಾ ರಾಕೇಶ್, ಮಂಜುಳಾ, ಸಬಿತಾ, ಶಾಸಕರ ಆಪ್ತ ಕಾರ್ಯದರ್ಶಿ ರವಿ, ಇನ್ನಿತರರಿದ್ದರು

Related Articles

Leave a Reply

Your email address will not be published.

Back to top button