Uncategorized

ನಟ ಪುನೀತ್ ರಾಜಕುಮಾರ್ ನಿಧನಕ್ಕೆ ಶ್ರೀಶೈಲ ಶ್ರೀಗಳಿಂದ ಸಂತಾಪ

ಅಥಣಿ: ನಟ ಪುನೀತ್ ರಾಜಕುಮಾರ್ ಅಕಾಲಿಕ ಮರಣಕ್ಕೆ ಶ್ರೀಶೈಲ ಪೀಠದ ಜಗದ್ಗುರುಗಳಾದ ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಅವರು ಸಂತಾಪ ಸೂಚಿಸಿದ್ದಾರೆ.

ಅವರು ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಮಾತನಾಡಿ, ಪುನೀತ್ ರಾಜಕುಮಾರ್ ಬಾಲನಟನಾಗಿ ಎಲ್ಲರಿಗೂ ಚಿರಪರಿಚಿತ, ಅವರ ನಿಧನದಿಂದ ಸಮಾಜಕ್ಕೆ ಹಾಗೂ ಚಿತ್ರ ರಂಗಕ್ಕೆ ತುಂಬಲಾರದ ನಷ್ಟ ಸಂಭವಿಸಿದೆ. ಸಮುದಾಯಕ್ಕೆ ಉತ್ತಮ್ಮ ಚಿತ್ರಗಳನ್ನು ನೀಡಿದ್ದಾರೆ. ಚಲನಚಿತ್ರ ಅಭಿಮಾನಿಗಳಿಗೆ ಒಳ್ಳೆಯ ಚಿತ್ರಗಳನ್ನು ನೀಡಿದ್ದಾರೆ. ಸಮಾಜದಲ್ಲಿ ವಿನಯದಿಂದ ಇದ್ದವರು ಹಾಗೂ ಸಮಾಜಪರ ಕಾರ್ಯಗಳಿಗೆ ಸ್ಪಂದಿಸುವ ಅಪ್ಪು ಹೃದಯಾಘಾತದಿಂದ ಮರನ ಹೊಂದಿದ್ದೂ ಅಭಿಮಾನಿ ಬಳಗಕ್ಕೆ ತೀವ್ರ ಸಂಕಷ್ಟ ಈಡಾಗಿದೆ ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳ ಬಳಗಕ್ಕೆ ದುಃಖ ಭರಿಸುವ ಶಕ್ತಿ ಭಗವಂತನ ಅನುಗ್ರಹಿಸಲಿ ಎಂದೂ ಹಾರೈಸಿದರು.

ಪುನೀತ್ ರಾಜ್ ಕುಮಾರ್ ಅಪ್ಪು ಎಂದೆ ಅತಿ ಚಿರಪರಿಚಿತ ಆಗಿದ್ದರು, ಚಲನಚಿತ್ರ ಅಭಿಮಾನಿಗಳ ಹೃದವನ್ನು ಗೆದ್ದಿದ್ದರು. ಸಾರ್ವಜನಿಕ ಬದುಕಿನಲ್ಲಿ ಅತಿ ವಿನಯದಿಂದ ಹಾಗೂ ಸಾರ್ವಜನಿಕ ಕಾರ್ಯಗಳಿಗೆ ಸ್ಪಂದನೆ ಆದರ್ಶ ವ್ಯಕ್ತಿತ್ವ ಹೊಂದಿದ್ದರು. ಅವರ ಅಕಾಲಿಕ ನಿಧಾನಕ್ಕೆ ಅಪಾರ ಅಭಿಮಾನ ಬಳಗ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಶ್ರೀಶೈಲ ಪೀಠದ ಜಗದ್ಗುರು ಸಂತಾಪ ಸೂಚಿಸಿದ್ದಾರೆ.

Related Articles

Leave a Reply

Your email address will not be published.

Back to top button