Uncategorized
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ವೃದ್ಧೆ ನಿರಾಕರಣೆ : ಮನವೊಲಿಕೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಹರಸಾಹಸ
ಬಾಗಲಕೋಟೆ: ವೃದ್ಧೆಯೊಬ್ಬಳು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಜಮ್ಮನಟ್ಟಿ ಗ್ರಾಮದ ವೃದ್ಧೆ ಚುಳಚವ್ವ ಗಿಡ್ಡನಾಯಕನಹಳ್ಳಿ ಮನೆಗೆ ಲಸಿಕೆ ಹಾಕಲು ಆರೋಗ್ಯ ಇಲಾಖೆ ಸಿಬ್ಬಂದಿ ಹೋದ ವೇಳೆ ಲಸಿಕೆ ಬೇಡವೆಂದು ನೆಲದ ಮೇಲೆ ಹೊರಳಾಡಿ ಗೋಳಿಟ್ಟಿದ್ದಾಳೆ. ವಯೋವೃದ್ಧೆ ಮನವೊಲಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟಿದ್ದು, ತಿಂಗಳ ಮಾಸಾಶನ ಬಂದ್ ಮಾಡೋದಾಗಿ ಹೇಳಿದ್ರೂ ಲಸಿಕೆ ಹಾಕಿಸಿಕೊಂಡಿಲ್ಲ.
ನಾನು ಜೋಗಮ್ಮಳಿದ್ದು ಲಸಿಕೆ ಹಾಕಿಸಿಕೊಂಡ್ರೆ ಏನಾದ್ರೂಯಾದರೆ ಪೂಜೆ ಮಾಡುವವರು ಯಾರು ಎಂದಿದ್ದಾಳೆ ವೃದ್ಧೆ. ಏನು ಆಗುವುದಿಲ್ಲ ನಾವಿದ್ದೇವೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಹೇಳಿದರೂ ವೃದ್ಧೆ ಮಾತ್ರ ಲಸಿಕೆ ಹಾಕಿಸಿಕೊಂಡಿಲ್ಲ.