ಅರ್ಬಾಜ್ ಕೊಲೆ ಪ್ರಕರಣದ ತನಿಖೆ ಸೂಕ್ತ ರೀತಿಯಲ್ಲಿ ನಡೆಯಬೇಕು: ಸತೀಶ್ ಜಾರಕಿಹೊಳಿ
ವರದಿ: ಮಲ್ಲಿಕ್ ಬೆಳಗಲಿ
ಬೆಳಗಾವಿ: ಖಾನಾಪುರದಲ್ಲಿ ನಡೆದ ಅರ್ಬಾಜ್ ಕೊಲೆ ಪ್ರಕರಣದ ಹೆಚ್ಚು ಮಾಹಿತಿ ನನಗೆ ಇಲ್ಲ. ಘಟನೆ ನಡೆದು 9 ದಿನ ಕಳೆದರೂ ಪೊಲೀಸರು ಆರೋಪಿಗಳ ಬಗ್ಗೆ ಸ್ಪಷ್ಟ ಮಾಹಿತಿ ನಿಡಿಲ್ಲ. ಆದ್ರೆ ಏನೇ ಆದರೂ ಅರ್ಬಾಜ್ ಕೊಲೆ ಪ್ರಕರಣದ ತನಿಖೆಯನ್ನ ಪೊಲೀಸರು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು. ನಾನು ಕೂಡ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮುಂದಿನ ನಡೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದೇನೆ ಎಂದು ಇಂದು ನಡೆದ ಮಾದ್ಯಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರಶ್ನೆಗೆ ಉತ್ತರಿಸುವ ವೇಳೆ ಹೇಳಿಕೆ ನೀಡಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು ಸಂಜಯ್ ಪಾಟೀಲ್ ಹೇಳಿಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು. ವಿರೋಧಿಗಳು ಇರಬೇಕು. ಹೇಳಿಕೆಗಳು ಸರಿಯಾದ ಧಾಟಿಯಲ್ಲಿ ಇರಬೇಕು. ಜನರು ಎಲ್ಲವನ್ನೂ ನೋಡ್ತಾ ಇರ್ತಾರೆ. ನಮ್ಮ ನಾಯಕರು ನೆಗೆಟಿವ್ ಇರೋದನ್ನ ಪಾಸಿಟಿವ್ ಮಾಡಿಕೊಳ್ಳಬೇಕು,ರಾಜಕೀಯವಾಗಿ ಎಲ್ಲವೂ ಆಗುತ್ತಲೇ ಇರುತ್ತದೆ ಎಂದರು.
ಸದ್ಯದಲ್ಲೇ ಇಬ್ಬರು ಪ್ರಮುಖ ನಾಯಕರು ಕಾಂಗ್ರೆಸ್ ಸೇರ್ಪಡೆ
ಈ ವಾರದಲ್ಲಿ ಇಬ್ಬರು ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ತಾರೆ ಎಂದು ಬಾಂಬ್ ಸಿಡಿಸಿದ್ದಾರೆ. ಇನ್ನು ಬೆಂಗಳೂರು ಮಟ್ಟದಲ್ಲಿ ಆಪರೇಷನ್ ಹಸ್ತ ನಡೆಯುತ್ತಿದೆ ಸ್ಥಳೀಯ ಅಸಮಾಧಾನ ಹೊಂದಿರುವ ನಾಯಕರನ್ನ ಪರಸ್ಪರ ಸಂಪರ್ಕಿಸಿ ಮಾತನಾಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.