Uncategorized

ಕೆಸರುಗದ್ದೆಯಾದ ರಸ್ತೆ; ಜನ, ಜಾನುವಾರುಗಳಿಗೆ ಕಾಲಿಡಲೂ ಹಿಂಜರಿಕೆ

ರಾಮನಗರ: ಚನ್ನಪಟ್ಟಣ ತಾಲೂಕಿನ ಅಂಬಾಡಹಳ್ಳಿ ಮತ್ತು ಬಾಣಂತಹಳ್ಳಿ ಸಂಪರ್ಕಿಸುವ ಮಳೆ ಬಂದು ಸಂಪೂರ್ಣ ಓಡಾಟಕ್ಕೂ ಯೋಗ್ಯವಲ್ಲದಂತಾಗಿ ಈ ರಸ್ತೆಯೇ ಸೀಲ್‍ಡೌನ್ ಆಗಿದೆ.

ಅಂಬಾಡಹಳ್ಳಿ ಮತ್ತು ಬಾಣಂತಹಳ್ಳಿ ರಸ್ತೆ ಹತ್ತಾರು ಗ್ರಾಮಗಳಿಗೆ ಮುಖ್ಯ ರಸ್ತೆಯಾಗಬೇಕಿತ್ತು. ಕೆಲವು ಬಲಢ್ಯರು ರಸ್ತೆ ಒತ್ತುವಾರಿ ಮಾಡಿ ರಸ್ತೆ ಅಭಿವೃದ್ಧಿಗೆ ತಗಾದೆ ತೆಗೆದಿದ್ದರಿಂದ ರಸ್ತೆ ಈ ರೀತಿ ಕೆಸರು ಗದ್ದೆಯಾಗಿ ಸಂಪೂರ್ಣ ಸಿಲ್ ಡೌನ್ ಆಗಲು ಕಾರಣವಾಗಿದೆ.

ಈ‌ ರಸ್ತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಮುಖ ವಾಣಿಜ್ಯ ಕೇಂದ್ರವಾದ ಹಲಗೂರಿಗೆ ತೆರಳಲು ಈ ಮಾರ್ಗ ಈ ಭಾಗದ ಜನಕ್ಕೆ ಅನುಕೂಲವಾಗಿದೆ. ಆದರೇ ಕೆಲವರ ಚಿತಾವಣೆಯಿಂದ ಈ ಪಾದಚಾರಿಗಳು ಕಾಲಿಡಲು ಅಂಜುವಂತಾಗಿದೆ.

ಈ ರಸ್ತೆ ಮಣ್ಣಿನಿಂದ ಕೂಡಿ ಚರಂಡಿ ವ್ಯವಸ್ಥೆ ಇಲ್ಲವಾಗಿದೆ. ಮಳೆ ಬಂದರೆ ಯಾರೊಬ್ಬರು ಓಡಾಡಲು ಆಗದ ದುಸ್ಥಿತಿಯಲ್ಲಿದೆ. ಕಳೆದ ಹತ್ತಾರು ವರ್ಷದಿಂದ ಇದೇ ಅವ್ಯವಸ್ಥೆ ಅನುಭವಿಸಿರುವ ಗ್ರಾಮಸ್ಥರು ಈಗಾಗಲೇ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಾಹನಗಳು, ಮನುಷ್ಯರಿರಲಿ ರೈತರು ಸಾಕಿರುವ ರಾಸುಗಳು, ಬೀಡಾಡಿ ನಾಯಿಗಳು ಸಹ ಈ ರಸ್ತೆಗೆ ಹೆಜ್ಜೆ ಇಡಲು ಹಿಂಜರಿಯುತ್ತಿವೆ. ಮಳೆ ಇಲ್ಲದ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳು ಮತ್ತು ಪಾದಚಾರಿಗಳು ಡ್ಯಾನ್ಸ್ ಮಾಡಿಕೊಂಡು ತಿರುಗಾಡಬೇಕು. ಆದ್ರೆ ಮಳೆ ಬಂದ್ರೆ ಈ ರಸ್ತೆ ಪಕ್ಕದಲ್ಲಿರುವ ಜಮೀನುಗಳ ದಿಣ್ಣೆಗಳೇ ಪಾದಚಾರಿಗಳಿಗೆ ಆಶ್ರಯವಾಗಿದೆ ಎಂದು ಹೇಳುತ್ತಾರೆ ನಾಗರೀಕರು.

ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದರೂ ದುರಸ್ಥಿ ಆಗಲಿಲ್ಲ. ಜನಪ್ರತಿನಿಧಿಗಳಿಗೆ ಮೌಖಿಕವಾಗಿ, ಲಿಖಿತವಾಗಿ ಹತ್ತಾರು ಬಾರಿ ಮನವಿ ಮಾಡಿದರೂ ಇತ್ತ ಗಮನ ನೀಡಿಲ್ಲವೆನ್ನುವುದು ಸ್ಥಳೀರ ದೂರು.

ಅಂಬಾಡಹಳ್ಳಿ ಗ್ರಾಮ ಬಾಣಗಹಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಬರುತ್ತದೆ. ಬಾಣಂತಹಳ್ಳಿ ಗ್ರಾಮ. ಎಲೆತೋಟದಹಳ್ಳಿ ಗ್ರಾ.ಪಂ. ವ್ಯಾಪ್ತಿಗೆ ಬರುತ್ತದೆ.
ಆದರೆ ಎರಡು ಪಂಚಾಯಿತಿಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಸ್ತೆ ಸಮಸ್ಯೆ ಬಗೆ ಹರಿಸಲು ಮುಂದಾಗಿಲ್ಲವೆಂದು ಎರಡು ಪಂಚಾಯತಿ ವ್ಯಾಪ್ತಿಯ ಸ್ಥಳೀಯರು ಬೇಸರಗೊಳ್ಳುತ್ತಾರೆ.

ಈ ಬಗ್ಗೆ ಮುಂದಿನ ದಿನದಲ್ಲಿಯಾದರೂ ರಸ್ತೆ ಸಮಸ್ಯೆ ಬಗೆಹರಿಸಿ ಸುಸಜ್ಜಿತ ರಸ್ತೆ ಮಾಡುವತ್ತ ಗಮನ ನೀಡಬೇಕೆನ್ನುವುದು ಇಲ್ಲಿನ ಸಂಚಾರಿಗಳ ಆಗ್ರಹವಾಗಿದೆ.

Related Articles

Leave a Reply

Your email address will not be published.

Back to top button