ಸಿದ್ದರಾಮಯ್ಯ ಟಾರ್ಗೆಟ್ ಮಾಡಲು ಅಲ್ಪಸಂಖ್ಯಾತರನ್ನು ಎಳೆದು ತರುವುದು ತಪ್ಪು: ರಿಜ್ವಾನ್ ಅರ್ಷದ್
ಹುಬ್ಬಳ್ಳಿ: ಕಳೆದ 20 ವರ್ಷದಲ್ಲಿ ಕುಮಾರಸ್ವಾಮಿ ಅವರು ರಾಜಕಾರಣದಲ್ಲಿ ಅಲ್ಪಸಂಖ್ಯಾತರ ಬಗ್ಗೆ ಒಂದಿಷ್ಟೂ ಕಾಳಜಿ ತೋರಿಲ್ಲ. ಬೈ ಇಲೆಕ್ಷನ್ ಬಂದಾಗ ಮಾತ್ರ ಅಲ್ಪಸಂಖ್ಯಾತರ ಬಗ್ಗೆ ತುಂಬಾ ಕಾಳಜಿ ಮಾಡುತ್ತಾರೆ. ಇವತ್ತು ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಲು ಅಲ್ಪ ಸಂಖ್ಯಾತರನ್ನು ಕುಮಾರಸ್ವಾಮಿಯವರು ಎಳೆದು ತರುವುದು ತಪ್ಪು, ಹಾಗೂ ಅದು ಸರಿಯಲ್ಲ ಎನ್ನುವ ಮೂಲಕ ಶಾಸಕ ರಿಜ್ವಾನ ಅರ್ಷದ್ ಟಾಂಗ್ ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ನಾನು ಕುಮಾರಸ್ವಾಮಿ ಅವರಿಗೆ ಹೇಳುತ್ತೇನೆ, ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಿಲ್ಲ ಅಂತ ಅನ್ಕೋಬೇಡಿ. ನೀವೇ ಸಿಎಂ ಆದಾಗ ನಿಮ್ಮ ಜೆಡಿಎಸ್ ಪಕ್ಷದಿಂದ ಯಾರನ್ನೂ ಮಂತ್ರಿ ಮಾಡಿಲ್ಲ. ಅಲ್ಪ ಸಂಖ್ಯಾತರ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ನಿಮ್ಮ ಥರ ನಡೆದುಕೊಂಡಿಲ್ಲ. ಕಾಂಗ್ರಾಸ್ ಪಕ್ಷ ಎಲ್ಲರನ್ನೂ ಬೆಳೆಸಿದೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಸದ್ಯ ಎಲ್ಲವೂ ಬೆಲೆ ಏರಿಕೆ ಆಗಿವೆ ಆದರೆ ಜೆಡಿಎಸ್ ಪಕ್ಷದಿಂದ ಬಿಜೆಪಿ ವಿರುದ್ದ ಯಾವುದೇ ಹೋರಾಟಗಳಿಲ್ಲ. ನಿರುದ್ಯೋಗ ದ ಸಮಸ್ಯೆ ಹೆಚ್ಚಾಗಿದೆ, ಒಂದೇ ಒಂದು ಹೋರಾಟ ಮಾಡ್ತಿಲ್ಲ. ಇದನ್ನು ನೋಡಿದರೆ ಕುಮಾರಸ್ವಾಮಿ ಅವರು ಬಡವರ ಪರ ಇಲ್ಲ. ರಾಜ್ಯ ಕೇಂದ್ರ ಬಿಜೆಪಿ ಆಡಳಿತದ ವಿರುದ್ದ ಒಂದು ಹೋರಾಟ ಇಲ್ಲ. ಈ ನಿಮ್ಮ ನಡೆಯನ್ನು ನಾವು ರೀತಿ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ಅವರ ಜೊತೆ ವೈಯಕ್ತಿಕ ದ್ವೇಷ ಇದ್ರೆ ಮಾಡಿಕೊಳ್ಳಿ, ಆದರೆ ಅಲ್ಪಸಂಖ್ಯಾತರ ವಿರುದ್ದ ಮಾತನಾಡಬೇಡಿ. ನೀವು ಎರಡು ಬಾರಿ ಸಿಎಂ ಆದವರು. ನೋಡಿಕೊಂಡು ಮಾತನಾಡಿ ಎಂದು ಕುಮಾರಸ್ವಾಮಿ ಗೆ ಎಚ್ಚರಿಕೆ ನೀಡಿದ್ದಾರೆ.