Uncategorized

ಜಮಖಂಡಿಯಲ್ಲಿ ಕೋಳಿ ಫಾರಂ ನಲ್ಲಿ ಅಕ್ರಮ ಪಡಿತರ ಅಕ್ಕಿ ಸಂಗ್ರಹ: ಅಧಿಕಾರಿಗಳಿಂದ ದಾಳಿ ಐವರ ವಶಕ್ಕೆ

ಬಾಗಲಕೋಟೆ: ಕೋಳಿ ಪಾರಂನಲ್ಲಿ ಆಕ್ರಮವಾಗಿ ಬರೋಬ್ಬರಿ 20ಟನ್ ಪಡಿತರ ಅಕ್ಕಿ ಸಂಗ್ರಹಿಸಿ ಮಹಾರಾಷ್ಟ್ರ ರಾಜ್ಯಕ್ಕೆ ಸಾಗಿಸುವಾಗ ದಾಳಿ ಮಾಡಿದ್ದಾರೆ.

ಜಮಖಂಡಿ ಕಟ್ಟೆ ಕೆರೆ ಬಳಿಯ ಕೋಳಿ ಪಾರಂನಲ್ಲಿ ಸಂಗ್ರಹಿಸಲಾಗಿತ್ತು. ಒಂದು ಲಾರಿ ಹಾಗೂ ಮಿನಿ ಲಾರಿ ವಶಕ್ಕೆ ಪಡೆದಿದ್ದು, 2೦ ಟನ್ ಪಡಿತರ ಅಕ್ಕಿ ಜಪ್ತಿ ಮಾಡಿಕೊಂಡು
ಐದು ಜನರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಆರೋಪಿಗಳಾದ ಹಸೀನಾ ಪತ್ತೆ, ಮುಬಾರಕ್ ಮುಧೋಳ, ದಸ್ತಗೀರ ಮುಧೋಳ, ಮಹಾಬೂಬಿ ಜರೆ, ಸಾಬು ಉಳ್ಳಾಗಡ್ಡಿ. ಬಂಧಿತರಾಗಿದ್ದು ಇವರು ಮುಧೋಳ, ಜಮಖಂಡಿ ಮೂಲದವರಾಗಿದ್ದಾರೆ. ಜಮಖಂಡಿ ತಹಶೀಲ್ದಾರ್ ಪ್ರಶಾಂತ ಚನಗೊಂಡ ನೇತೃತ್ವದಲ್ಲಿ ದಾಳಿ ಮಾಡಿ ಅಕ್ರಮ ಅಕ್ಕಿ ಸಾಗಾಟ ಪ್ರಕರಣ ಪತ್ತೆ ಹಚ್ಚಿದ್ದಾರೆ. ತಹಶೀಲ್ದಾರ್ ಅವರು ಜಮಖಂಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

Related Articles

Leave a Reply

Your email address will not be published.

Back to top button