Uncategorized

ಮಹಿಳೆಯರು ಸ್ನಾನ ಮಾಡುವ ವಿಡಿಯೋ ಚಿತ್ರೀಕರಿಸ್ತಾರೆ : ಅಪ್ಸರಕೊಂಡದಲ್ಲಿ ಮನೆ ಮಾಡಿದ ಆತಂಕ

ಕಾರವಾರ : ಉತ್ತರ ಕನ್ನಡ ವೈವಿಧ್ಯತೆಯ ಪ್ರವಾಸಿ ತಾಣಗಳನ್ನು ಹೊಂದಿರುವ ಜಿಲ್ಲೆ. ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ ವಿಶೇಷ ಪ್ರವಾಸಿ ತಾಣವೂ ಹೌದು. ಇಲ್ಲಿ ಸಹಸ್ರಾರು ಪ್ರವಾಸಿಗರು ಬಂದು ಹೋಗುವುದು ಸಾಮಾನ್ಯ. ಕೇವಲ ಪ್ರವಾಸಕ್ಕೆ ಎಂದಷ್ಟೇ ಅಲ್ಲ. ವಿವಾಹಪೂರ್ವ ಫೋಟೋಶೂಟ್ ಗಳು, ವಿವಾಹದ ನಂತರದ ಫೋಟೋ ಶೂಟ್ ಮಾಡಿಸಲು ಜನರು ಇಲ್ಲಿಗೆ ಬರುವುದು ಸಾಮಾನ್ಯ.

ಆದರೆ ಇಂತಹ ಫೋಟೋ ಶೂಟ್ ಗೆ ಬರುವ ಜನರ ಮೇಲೆ ಸ್ಥಳೀಯ ಜನರು ಸಂಶಯ ವ್ಯಕ್ತಪಡಿಸಿದ್ದಾರೆ.‌ ಅದಕ್ಕೆ ಕಾರಣ ಡ್ರೋನ್ ಶೂಟಿಂಗ್. ಅಪ್ಸರಕೊಂಡ ಸುತ್ತಲಿನ ಕಡಲ ತೀರಕ್ಕೆ ಹೊಂದಿಕೊಂಡಿರುವ ಹಲವು ಮನೆಗಳ ಶೌಚಾಲಯ ಹಾಗೂ ಸ್ನಾನಗೃಹಗಳಿಗೆ ಮೇಲ್ಛಾವಣಿ ಇಲ್ಲ. ಪ್ರವಾಸಿಗರು ಪ್ರೀವೆಡ್ಡಿಂಗ್ ಶೂಟ್ ನೆಪದಲ್ಲಿ ಊರ ಮಧ್ಯೆ ಡ್ರೋನ್ ಹಾರಿಸಿ ಬಿಡುತ್ತಿದ್ದಾರೆ. ಇಲ್ಲಿಗೆ ಡ್ರೋನ್ ಹಿಡಿದು ಆಗಮಿಸುವ ಕೆಲ ಪ್ರವಾಸಿಗರಿಗೆ ಈ ಭಾಗದ ಪರಿಚಯ ಚೆನ್ನಾಗಿ ಗೊತ್ತಿದೆ.

ತೆಂಗಿನಗರಿಯಿoದ ಸುತ್ತಲೂ ತಡೆ ನಿರ್ಮಿಸಿಕೊಂಡು ಮಹಿಳೆಯರು ಹಾಗೂ ಪುರುಷರು ಸ್ನಾನ ಮಾಡುತ್ತಾರೆ.ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಪ್ರವಾಸಿಗರು ಪ್ರೀ ವೆಡ್ಡಿಂಗ್ ಶೂಟಿಂಗ್ ನೆಪದಲ್ಲಿ ಡ್ರೋನ್ ಹಾರಿಸಿ ಮಹಿಳೆಯರು ಹಾಗೂ ಯುವತಿಯರು ಸ್ನಾನ ಮಾಡುವ ವಿಡಿಯೋಗಳನ್ನು ತೆಗೆಯುತ್ತಿರುವ ಘಟನೆ ತಾಲೂಕಿನ ಅಪ್ಸರಕೊಂಡ ಸುತ್ತಮುತ್ತ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸ್ಥಳೀಯರು ನಮ್ಮ ಈ ಭಾಗದಲ್ಲಿ ಪ್ರವಾಸಿಗರು ಡ್ರೋನ್ ಹಾರಿಸಿ ಫೋಟೋಗ್ರಾಫಿ ಮಾಡುವುದನ್ನು ತಕ್ಷಣ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಸ್ಥಳೀಯರು ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಸಭೆ ಆಯೋಜನೆ ಮಾಡಿ ತಮಗೆ ಆಹ್ವಾನಿಸುತ್ತೇವೆ. ತಮ್ಮ ಸಮಸ್ಯೆಗಳನ್ನು ತಿಳಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳೋಣ ಎಂದು ಹೇಳಿದ್ದಾರೆ.

Related Articles

Leave a Reply

Your email address will not be published.

Back to top button