Uncategorized

ರಾಮನಗರ, ಚನ್ನಪಟ್ಟಣ ನಗರಸಭೆ ವರಿಷ್ಠರ ಗಾದಿಗೆ ನಿಗದಿಯಾಗದ ಚುನಾವಣೆ: ಐದೂವರೆ ತಿಂಗಳಿಂದ ಚಡಪಡಿಸುತ್ತಿರುವ ಸದಸ್ಯರು

ರಾಜೇಶ್ ಕೊಂಡಾಪುರ

ರಾಮನಗರ: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ – ಉಪಾಧ್ಯಕ್ಷರ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿ ಒಂದು ತಿಂಗಳು ಕಳೆದರು ಜಿಲ್ಲಾಡಳಿತ ಮಾತ್ರ ಇನ್ನೂ ದಿನಾಂಕ ನಿಗದಿ ಮಾಡಿಲ್ಲ.

ಹೌದು, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ನಡೆಸಲು ಸೆ.20ರಂದು ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಆನಂತರ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿಗಳು ಸೆ.21ರಂದು ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಕಾರಿಗಳಿಗೆ ಪತ್ರ ಬರೆದು ಚುನಾವಣೆ ನಡೆಸಲು ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಿದ್ದರು.

ಸರ್ಕಾರವೇ ಚುನಾವಣೆ ನಡೆಸುವಂತೆ ಹೇಳಿ ತಿಂಗಳೇ ಕಳೆದರೂ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಕಾರಿಗಳು ಅದರ ಬಗ್ಗೆ ಗಮನ ಹರಿಸಿಲ್ಲ. ಚುನಾಯಿತ ಜನಪ್ರತಿನಿಗಳು ಅಕಾಧಿರಕ್ಕೆ ಬಂದರೆ ತಮ್ಮ ಕೆಲಸ ಕಾರ್ಯಗಳಿಗೆ ತೊಡಕಾಗುತ್ತದೆ ಎಂದು ಭಾವಿಸಿರುವ ಅಧಿಕಾರಿ ವರ್ಗದ ಪ್ರಭಾವೂ ಚುನಾವಣೆ ದಿನಾಂಕ ನಿಗದಿವಿಳಂಬವಾಗಲು ಕಾರಣ ಎನ್ನಲಾಗಿದೆ. ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆ ಚುನಾಯಿತ ಪ್ರತಿನಿಧಿಗಳು ಕೊರೊನಾ ಕಾರಣದಿಂದಾಗಿ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿದ್ದರು. ರಾಜ್ಯ ಸರ್ಕಾರ ಚುನಾವಣೆ ನಡೆಸಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡುತ್ತಿದ್ದಂತೆ ಅಧಿಕಾರದ ಗದ್ದುಗೆ ಹಿಡಿಯಲು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಚುರುಕು ಪಡೆದಿತ್ತು.

ಆದರೆ, ಚುನಾವಣಾಕಾರಿಗಳಾಗಿರುವ ಉಪವಿಭಾಗಾಕಾರಿಗಳು ಈವರೆಗೂ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿಲ್ಲ. ಹೀಗಾಗಿ ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳಿಗೆ ಆಕಾಂಕ್ಷಿತರು ಚುನಾವಣಾ ದಿನಾಂಕವನ್ನು ಎದುರು ನೋಡುತ್ತಿದ್ದರೆ, ರಾಜಕೀಯ ಪಕ್ಷಗಳ ನಾಯಕರು ಕಾದು ನೋಡುವ ತಂತ್ರಅನುಸರಿಸುತ್ತಿದ್ದಾರೆ.

ನಗರಸಭೆಯೊಳಗೆ ಪ್ರವೇಶಿಸಲು ಉತ್ಸಾಹದಲ್ಲಿರುವ ಚುನಾಯಿತ ಜನಪ್ರತಿನಿಗಳ ಆಸೆಗೆ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಕಾರಿಗಳು ವೌನ ವಹಿಸುವ ಮೂಲಕ ತಣ್ಣೀರು ಎರೆಚಿದ್ದಾರೆ.

ನವೆಂಬರ್ ನಲ್ಲಿ ಚುನಾವಣೆ:

ರಾಮನಗರ ಮತ್ತು ಚನ್ನಪಟ್ಟಣ ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯನ್ನು ಅಕ್ಟೋಬರ್ ತಿಂಗಳೊಳಗೆ ನಡೆಸಲು ಉದ್ದೇಶಿಸಲಾಗಿತ್ತು. ಈ ತಿಂಗಳಲ್ಲಿ ಸಾಲು ಸಾಲು ಸರ್ಕಾರಿ ರಜೆಗಳು ಹಾಗೂ ಸಭೆಗಳು ಹೆಚ್ಚಾಗಿದ್ದ ಕಾರಣ ಚುನಾವಣೆ ದಿನಾಂಕ ನಿಗದಿ ಪಡಿಸಲು ಸಾಧ್ಯವಾಗಲಿಲ್ಲ.

ಚುನಾಯಿತ ಪ್ರತಿನಿಗಳಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕೆಂಬ ಒತ್ತಡವೂ ಹೆಚ್ಚಾಗಿದೆ. ಹೀಗಾಗಿ ಎರಡೂ ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳಿಗೆ ನವೆಂಬರ್ ತಿಂಗಳ ಎರಡನೇ ವಾರದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಮುಂದುವರೆದ ಪೈಪೋಟಿ:

ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿತ ಸದಸ್ಯರು ತಮ್ಮ ನಾಯಕರ ಮೂಲಕ ವರಿಷ್ಠರ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದಾರೆ. ರಾಮನಗರ ನಗರಸಭೆಯಲ್ಲಿ ಕಾಂಗ್ರೆಸ್ ಹಾಗೂ ಚನ್ನಪಟ್ಟಣ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲು ಸ್ಪಷ್ಟ ಬಹುಮತ ಪಡೆದಿವೆ. ಚುನಾವಣೆ ದಿನಾಂಕ ನಿಗದಿಯಾದ ನಂತರ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ನಡೆದು ಅಧಿಕಾರ ಕೈತಪ್ಪಿದರು ಅಚ್ಚರಿ ಇಲ್ಲ.

ರಾಮನಗರ ನಗರಸಭೆಯ ಅಕಾರವ 2019ರ ಮಾರ್ಚ್ 16 ಹಾಗೂ ಚನ್ನಪಟ್ಟಣ ನಗರಸಭೆಯ ಅಧಿಕಾರ ಮಾ.14ರಂದು ಅಂತ್ಯಗೊಂಡಿತ್ತು. ಆನಂತರ 2 ವರ್ಷಗಳ ಕಾಲ ಮೀಸಲಾತಿ ತೊಡಕಿನಿಂದ ರಾಮನಗರ ಹಾಗೂ ಚನ್ನಪಟ್ಟಣ ನಗರಸಭೆ ಚುನಾವಣೆ ಮುಂದೂಡಲ್ಪಟ್ಟಿತ್ತು. 2021ರ ಏಪ್ರಿಲ್ ನಲ್ಲಿ ಚುನಾವಣೆ ನಡೆದಿತ್ತು. ನೂತನ ಜನಪ್ರತಿನಿಗಳು ಆಯ್ಕೆಯಾಗಿ ಐದೂವರೆ ತಿಂಗಳು ಕಳೆದರೂ ಆಡಳಿತ ಯಂತ್ರದಿಂದ ದೂರವೇ ಉಳಿದಿದ್ದು, ಚುನಾಯಿತರಾದ ದಿನದಿಂದಲೂ ನೂತನ ಸದಸ್ಯರು ನಗರಸಭೆಯೊಳಗೆ ಪ್ರವೇಶಿಸಲು ಕಾತರರಾಗಿದ್ದಾರೆ.

Related Articles

Leave a Reply

Your email address will not be published.

Back to top button