Uncategorized

ಸಿದ್ದರಾಮಯ್ಯಗೆ ಭೂಕಂಪನದ ಅನುಭವ; ಕಲಬುರಗಿಯ ಗಡಿಕೇಶ್ವರದಿಂದಲೇ ಆರ್ ಅಶೋಕಗೆ ಕರೆ

ಕಲಬುರಗಿ: ಸತತ ಭೂಕಂಪನದಿಂದ ಆತಂಕಗೊಂಡು ಗ್ರಾಮವನ್ನು ತೊರೆಯುತ್ತಿರುವ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮಸ್ಥರಿಗೆ ಧೈರ್ಯ ತುಂಬಲು ಮಾಜಿ ಸಿಎಂ ಸಿದ್ದರಾಮಯ್ಯ ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡಿದ್ದು, ಸಿದ್ದರಾಮಯ್ಯ ಗ್ರಾಮದಲ್ಲಿ ಇರುವಾಗಲೇ ಮತ್ತೆ ಭೂ ಕಂಪಿಸಿದೆ. ಭೂಕಂಪನದ ಬಗ್ಗೆ ಸ್ವತಃ ಅನುಭವ ಪಡೆದ ಸಿದ್ದರಾಮಯ್ಯ ಸ್ಥಳದಿಂದಲೇ ಕಂದಾಯ ಸಚಿವ ಆರ್ ಅಶೋಕ ಅವರಿಗೆ ಕರೆ ಮಾಡಿ, ತೊಂದರೆಗೊಳಗಾಗಿರುವವರ ನೆರವಿಗೆ ಅಗತ್ಯ ಕ್ರಮ ಕೈಗೊಳ್ಳಲು ಹೇಳಿದ್ದಾರೆ.

ಗಡಿಕೇಶ್ವರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಿದ್ದರಾಮಯ್ಯ ಗ್ರಾಮಸ್ಥರಿಗೆ ಭೇಟಿ ಆಗ್ತಿರುವಾಗ ರಾತ್ರಿ 8:01 ನಿಮಿಷಕ್ಕೆ ಮತ್ತೆ ಭೂಕಂಪನ ಸಂಭವಿಸಿದೆ. ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಗಡಿಕೇಶ್ವರ ಗ್ರಾಮದಲ್ಲಿದ್ದ ಸಿದ್ದರಾಮಯ್ಯ ಅವರಿಗೂ ಇದು ಅನುಭವಕ್ಕೆ ಬಂದಿದೆ. ತಕ್ಷಣ ಗಡಿಕೇಶ್ವರ ಗ್ರಾಮದಿಂದಲೇ ಕಂದಾಯ ಸಚಿವ ಆರ್ ಅಶೋಕ ಅವರಿಗೆ ಕರೆಮಾಡಿ ಸಿದ್ದರಾಮಯ್ಯ ಮಾತನಾಡಿದರು.

ಎಡ್ಮೂರು ವರ್ಷದಿಂದ ಭೂಮಿಯಿಂದ ಸತತ ಸದ್ದು ಬರುತ್ತಿದ್ದು ಜನ ರೋಸಿಹೋಗಿದ್ದಾರೆ. ಕಳೆದ 15 ದಿನಗಳಿಂದ ಸದ್ದಿನೊಂದಿಗೆ ಭೂಕಂಪನ ಕೂಡಾ ಆಗುತ್ತಿದೆ. ಇದರಿಂದ ತೊಂದರೆ ಅನುಭವಿಸಿದ ಜನರು ಶೇ. 75 ರಷ್ಟು ಜನ ಊರು ತೊರೆದಿದ್ದಾರೆ‌. ಇರುವ ಜನರು ಆತಂಕದಿಂದ ದಿನ ಕಳೆಯುತ್ತಿದ್ದಾರೆ.‌ ಇವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟು ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು. ಊಟ ಬಟ್ಟೆ ಬೆಡ್‌ಶಿಟ್ ಸೇರಿದಂತೆ ಜೀವನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ನೀಡುವ ವ್ಯವಸ್ಥೆ ತಕ್ಷಣ ಮಾಡುವಂತೆ ಹೇಳಿದರು.

ಕಳೆದ 15 ದಿನಗಳಿಂದ ಗಡಿಕೇಶ್ವರ ಮತ್ತು ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಭೂಮಿ‌ ಕಂಪಿಸಿದ ಅನುಭವ ಆಗುತ್ತಲೆ ಇದೆ. ಸೋಮವಾರ ರಾತ್ತಿ 9-55 ಕ್ಕೆ ಚಿಂಚೋಳಿ, ಕಾಳಗಿ, ಸೇಡಂ ತಾಲೂಕಿನ ಬಹುತೇಖ ಗ್ರಾಮಗಳಲ್ಲಿ ಭೂಕಂಪನ‌ ಆಗಿದ್ದು, ರಿಕ್ಟರ್ ಮಾಪನದಲ್ಲಿ 4.1 ತೀವ್ರತೆ ದಾಖಲಾಗಿದೆ. ಇದರಿಂದ ಕಲಬುರಗಿ ಜಿಲ್ಲೆಯ ಜನರು ಆತಂಕದಲ್ಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button