Uncategorized
ನೆಚ್ಚಿನ ನಟನನ್ನು ಕಳೆದುಕೊಂಡು ಶಾಕ್ಗೆ ಹೃದಯಾಘಾತಕ್ಕೀಡಾದ ಮತ್ತೊಬ್ಬ ಅಭಿಮಾನಿ ಸಾವು
ಬೆಳಗಾವಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದ ಅಭಿಮಾನಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಶಿಂದೊಳ್ಳಿಯಲ್ಲಿ ನಡೆದಿದೆ.
ಕನಕದಾಸ ನಗರದ 33 ವರ್ಷದ ಪರಶುರಾಮ ಹನುಮಂತ ದೇವಣ್ಣವರ ಮೃತ ದುರ್ದೈವಿ. ಪುನೀತ್ ಅಪ್ಪಟ ಅಭಿಮಾನಿಯಾಗಿದ್ದ ಪರಶುರಾಮ ಪುನೀತ್ ಸಾವಿನ ಸುದ್ದಿ ಕೇಳುತ್ತಿದ್ದಂತೆ ಆಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದೇ ವೇಳೆ ಪುನೀತ್ ರಾಜ್ ಕುಮಾರ್ ನಿಧನ ಸುದ್ದಿಯಿಂದ ಮನನೊಂದ ಅಥಣಿಯ ಅಭಿಮಾನಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
26 ವರ್ಷದ ರಾಹುಲ್ ಗಾಡಿವಡ್ಡರ ಮೃತ ಯುವಕ. ಪುನೀತ್ ಸಾವಿನಿಂದ ಕಂಗಾಲಾಗಿದ್ದ ರಾಹುಲ್ ಭಾವುಕರಾಗಿದ್ದರು. ಬಳಿಕ ಪುನೀತ್ ಫೋಟೋಗೆ ಪೂಜೆ ಸಲ್ಲಿಸಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ.