Uncategorized
ಕಲುಷಿತ ನೀರು ಸೇವನೆ: ಆರು ತಿಂಗಳ ಗರ್ಭಿಣಿ ಸಾವು
ಕಲಬುರ್ಗಿ: ಕಲುಷಿತ ನೀರುಸೇವಿಸಿ ಗರ್ಭಿಣಿಯೊಬ್ಬಳು ಸಾವನ್ನಪ್ಪಿ, 12 ಜನ ಅಸ್ವಸ್ಥರಾದ ಘಟನೆ ಆಳಂದ ತಾಲೂಕಿನ ಬೋಳನಿ ಗ್ರಾಮದಲ್ಲಿ ನಡೆದಿದೆ. ಆರು ತಿಂಗಳ ಗರ್ಭಿಣಿ ಮಲ್ಲಮ್ಮ ಸಾವನ್ನಪ್ಪಿದ ದುರ್ದೈವಿಯಾಗಿದ್ದಾಳೆ.
ಮಳೆ ನೀರಿನ ಜೊತೆ ಕುಡಿಯೋ ನೀರಿಗೆ ಚರಂಡಿ ನೀರು ಮಿಶ್ರಿತವಾಗಿ ಅವಘಡ ಉಂಟಾಗಿದೆ ಎನ್ನಲಾಗಿದೆ. ಗ್ರಾಮದಲ್ಲಿ ಬಹುತೇಕ ಎಲ್ಲರಿಗೂ ತೀವ್ರ ವಾಂತಿಬೇಧಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಗ್ರಾಮಕ್ಕೆ ವೈದ್ಯರ ತಂಡ ಭೇಟಿ ನೀಡಿ ಪರಿಶೀಲಿಸುತ್ತಿದೆ.
ಗ್ರಾಮದ ಜನತೆ ವಾಂತಿಬೇದಿಯಿಂದ ಜರ್ಜರಿತರಾಗಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ವಿಪರ್ಯಾಸ ಅಂದ್ರೆ ಜಿಲ್ಲೆಯ ಹಲವು ಹಳ್ಳಿಗಳಲ್ಲಿನ ಜನ ವಾಂತಿ ಬೇಧಿಗೆ ನಲುಗುತ್ತಿದ್ದಾರೆ.