Uncategorized

ನಾವು ಮುಸ್ಲಿಂ ವಿರೋಧಿ ಅಲ್ಲ: ಕೇಂದ್ರ ಸಚಿವ ಜೋಶಿ

ಧಾರವಾಡ: ನಾವು ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ವಿರೋಧಿಗಳಲ್ಲ. ನಮಗೆ ಯಾವ ಸಮುದಾಯದ ವಿರೋಧವೂ ಇಲ್ಲ. ಆದರೆ, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಮುಸ್ಲಿಂ ಸಮುದಾಯದವರನ್ನು ಓಲೈಸುವುದಕ್ಕಾಗಿ ಆರ್‌ಎಸ್‌ಎಸ್‌ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಸಮುದಾಯದ ಮತದಾರರನ್ನು ಸೆಳೆಯಲು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಈ ರೀತಿ ಟೀಕೆ ಮಾಡೋದು ಸರಿಯಲ್ಲ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಕಾಂಪಿಟೇಷನ್ ಬಿದ್ದೋರ ಹಾಗೆ ಮುಗ್ದ ಮುಸಲ್ಮಾನರ ಮತ ಪಡೆಯಲು RSS ಹಾಗೂ ಬಿಜೆಪಿ ವಿರುದ್ದ ಒಬ್ಬರ ನಂತರ ಒಬ್ರು ಟೀಕೆ ಮಾಡ್ತಾ ಇದ್ದಾರೆ ಎಂದು ಕಿಡಿಕಾರಿದರು.

ನಮಗೆ ಮತ ನೀಡದೆ ಇದ್ರೆ RSS ಅಥವಾ ಬಿಜೆಪಿಯ ಭೂತಗಳು ಅಧಿಕಾರಕ್ಕೆ ಬರ್ತವೆ ಅಂಥಾ ಕತೆ ಕಟ್ಟುತ್ತಾ ಇದ್ದಾರೆ. ಆದರೆ ಮತದಾರರು ಪ್ರಬುದ್ಧರಾಗಿದ್ದಾರೆ. ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮತಗಳು ಅಥವಾ ಮತ ಬ್ಯಾಂಕ್ ಕುಗ್ಗುತ್ತ ಬರುತ್ತಿವೆ ಹೀಗಾಗಿ ಒಂದು ಸಮುದಾಯದ ಮತ ಬ್ಯಾಂಕ್ ಆದ್ರೂ ಇರಲಿ ಅನ್ನೋ ಕಲ್ಪನೆಯಲ್ಲಿ ಇಂತಹ ಹೇಳಿಕೆಗಳನ್ನು ನೀಡುತ್ತಾ ಇದಾರೆ. ಆದರೆ ಬಿಜೆಪಿ ಪಕ್ಷ ಯಾವ ಸಮುದಾಯದ ವಿರುದ್ಧ ಇಲ್ಲ ಎಂದರು.

ಜನಸಂಖ್ಯೆ ನಿಯಂತ್ರಣ ಸಂಬಂಧ ಮೋಹನ್ ಭಾಗವತ್ ಅವರು ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡು, ಮೋಹನ್ ಭಾಗವತ್ ಹೇಳಿರುವ ಹೇಳಿಕೆ ಸತ್ಯವಾಗಿದೆ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಸರ್ಕಾರಗಳು ಚಿಂತನೆ ನಡೆಸಬೇಕು ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ‌

Related Articles

Leave a Reply

Your email address will not be published. Required fields are marked *

Back to top button