Uncategorized

ಕಾಂಗ್ರೆಸ್ ದೇಶದ ಸಾಧನೆ ಕೊಂಡಾಡುವ ಮನಸ್ಸನ್ನೇ ಕಳೆದುಕೊಂಡಿದೆ: ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: 9 ತಿಂಗಳ ಅವಧಿಯಲ್ಲಿ ನೂರು ಕೋಟಿ‌ ಜನರಿಗೆ ನಾವು ವ್ಯಾಕ್ಸಿನ್ ಕೊಟ್ಟಿದ್ದು ಜಗತ್ತೇ ಕೊಂಡಾಡುತ್ತಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ದೇಶದ ಸಾಧನೆ ಕೊಂಡಾಡುವ ಮಾನಸಿಕತೆ ಇಲ್ಲ. ಒಂದು ದೇಶವಾಗಿ 100 ಕೋಟಿ ವ್ಯಾಕ್ಸಿನ್ ಗುರಿ ಮುಟ್ಟಿದ್ದು ದೊಡ್ಡ ಸಾಧನೆ. ಆದರೆ ಅದರಲ್ಲೂ ಟೀಕೆ ಟಿಪ್ಪಣಿ ಮಾಡುವಂತಹ ನಾಯಕರು ಇರುವದು ನಮ್ಮ ದೇಶದ ದೌರ್ಭಾಗ್ಯ ಎನ್ನುವ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಬಿಲ್ ಗೆಟ್ಸ್ ಸಹಿತ ಈ ಬಗ್ಗೆ ಟ್ವಿಟ್‌ ಮಾಡಿದ್ದಾರೆ. ಇಡಿ ಜಗತ್ತಿನಲ್ಲಿ 700 ಕೋಟಿ ವ್ಯಾಕ್ಸಿನ್ ಆಗಿದೆ. ಅದರಲ್ಲಿ 100ಕೋಟಿ ಭಾರತ ವ್ಯಾಕ್ಸಿನೇಷನ್‌ ಮಾಡಿದೆ. ಸಿದ್ಧರಾಮಯ್ಯನವರು ಹಾಗೂ ಅವರ ಮುಖಂಡರು ರಾಹುಲ್ ಗಾಂಧಿ ತರಹ ಆಡುತ್ತಿದ್ದಾರೆ. ರಾಹುಲ್ ಗಾಂಧಿಗೆ ಅರ್ಥ ಆಗಲ್ಲ, ನೀವು ಯಾಕೆ ಹೀಗೆ ಮಾತಾಡ್ತಿರಿ. ಮೋದಿ ಅವರಿಗೆ ಈ ಕ್ರೆಡಿಟ್ ಕೊಡಬೇಕು ಅಂತಾ ನಾವು‌ ಬಯಸಿಲ್ಲ, ಸ್ವತಃ ಮೋದಿನೇ ಬಯಸಿಲ್ಲ. ದೇಶಕ್ಕೆ ಈ ಕ್ರೆಡಿಟ್ ಕೊಡಿ ಎಂದರು.

ನಳಿನ್ ಕುಮಾರ ಕಟೀಲ್ ರಾಹುಲ್ ಗಾಂಧಿ ಬಗ್ಗೆ ಡ್ರಗ್ ಪೆಡ್ಲರ್ ಹೇಳಿಕೆ‌ಗೆ ಪ್ರತಿಕ್ರಿಯೆ ನೀಡಿದ ಅವರು, ಕಟೀಲ್ ಯಾಕೆ ಆ ರೀತಿ ಮಾತಾಡಿದ್ದಾರೆ ಗೊತ್ತಿಲ್ಲ, ಆದರೆ ಪತ್ರಿಕೆಯಲ್ಲಿ ಬಂದಿದೆ ಎಂದಿದ್ದಾರೆ. ಆ ಬಗ್ಗೆ ನಾನು ಮಾತನಾಡಲ್ಲ.

ಕೇವಲ ಕಟೀಲ್ ಅವರು ವೈಯಕ್ತಿಕ ನಿಂದನೆ ಮಾಡಿಲ್ಲ. ಸಿದ್ಧರಾಮಯ್ಯನವರು‌ ಮೋದಿಯರಿಗೆ ಏಕವಚನದಲ್ಲಿ ಮಾತನಾಡುತ್ತಾರೆ. 2014, 18 ಹಾಗೂ 18 ರ ಚುನಾವಣೆಯಲ್ಲಿ ಇವರು ಹೀನಾಯವಾಗಿ ಸೋತ್ತಿದ್ದಾರೆ. ಇದರಿಂದಾಗಿ ಸಿದ್ದರಾಮಯ್ಯನವರು ಹೀಗೆ ಮಾತುಗಳನ್ನು ಆಡುತ್ತಿದ್ದಾರೆ. ಯಾರೇ ಇರಲಿ ಕೆಳ ಮಟ್ಟದ ಟೀಕೆ ಮಾಡಬಾರದು ಇದು ನನ್ನ ವೈಯಕ್ತಿಕ ನಂಬಿಕೆ ಎಂದರು.

ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ

ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ನಾವು ಖಂಡಿತಾ ಗೆಲ್ಲುತ್ತೇವೆ. ನಾನು ಕೂಡಾ ಹಾನಗಲ್ ಚುನಾವಣೆ ಪ್ರಚಾರದಲ್ಲಿ ಈಗಾಗಲೇ ಪಾಲ್ಗೊಂಡಿದ್ದೇನೆ. ಸಿಂದಗಿ ಕ್ಷೇತ್ರಕ್ಕೆ ಹೋಗಿಲ್ಲ.
ಅಲ್ಲಿಯ ಕಾರ್ಯಕರ್ತರ ಜೊತೆ ಮುಖಂಡರ ಜೊತೆ ಸಂಪರ್ಕದಲ್ಲಿ ಇದ್ದೇನೆ. ಪೆಟ್ರೋಲ್ ಡೀಸೆಲ್ ದರ ಚುನಾವಣೆ ಮೇಲೆ ಎಫೆಕ್ಟ್ ಬಿರೋಲ್ಲ. ಆಗಲೂ ನಮಗೆ‌ ಜನ ಓಟು ಹಾಕಿದ್ದಾರೆ. ಆಸ್ಸಾಂನಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಗೆದ್ದಿದ್ದೆವೆ. ಯಾರು ವಿಶ್ಚಾಸಾರ್ಹರು ಎಂದು ಜನರಿಗೆ ಗೊತ್ತಿದೆ ಎಂದರು.

ಬಾಂಗ್ಲಾ‌ದಲ್ಲಿ ಹಿಂದೂಗಳ ಮೇಲಿನ ದಾಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಲ್ಲಿನ ಸರ್ಕಾರ ಜೊತೆ ನಮ್ಮ‌ಸರ್ಕಾರ‌‌ ಸಂಪರ್ಕದಲ್ಲಿದೆ. ಅಲ್ಲಿಯ ಸರ್ಕಾರ ಕೂಡಾ ಕ್ರಮ ಕೈಗೊಳ್ಳುತಿದೆ.ಭಾರತ ಸರ್ಕಾರ ಅಲ್ಲಿಯ ಹಿಂದೂಗಳ ಹಿತ ಕಾಪಾಡಲು ಬದ್ಧವಾಗಿದೆ ಎಂದರು.

ಕಾಂಗ್ರೆಸ್‌ನವರು ಸತ್ಯ ಹರಿಶ್ಚಂದ್ರರಲ್ಲ

ಉಪಚುನಾಣೆಯಲ್ಲಿ ಬಿಜೆಪಿಯವರು‌ ಹಣ ಹಂಚುತ್ತಿದ್ದಾರೆ ಎಂಬ ಕೆಪಿಸಿಸಿ ಡಿಕೆಶಿ ಹೇಳಿಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಸುಳ್ಳು ಆರೋಪ. ಕಾಂಗ್ರೆಸ್ ನವರು ಸತ್ಯ ಹರಿಶ್ಚಂದ್ರರಾ..?. ಕಾಂಗ್ರೆಸ್ ನವರು ಇಷ್ಟೇಲ್ಲಾ ಟೆಂಟ್ ಹಾಕಿದ್ದಾರೆ. ಅವರು ಹಣ ಖರ್ಚೇ ಮಾಡ್ತಿಲ್ವಾ. ಅಗತ್ಯವಿರುವ ದುಡ್ಡು ಅವರು ಖರ್ಚು ಮಾಡುತಿದ್ದಾರೆ, ನಾವು ಮಾಡ್ತಿದೇವೆ ಎಂದರು.

Related Articles

Leave a Reply

Your email address will not be published.

Back to top button