Uncategorized

ಉತ್ತರ ಕನ್ನಡ: ಶಿರಸಿಯಲ್ಲಿ ಶತಕ ದಾಟಿದ ಡೀಸೆಲ್ ದರ

ಕಾರವಾರ : ಶಿರಸಿ ಪಟ್ಟಣದ ಪೆಟ್ರೋಲ್ ಬಂಕ್‌ಗಳಲ್ಲಿ ಇಂದು ಲೀಟರ್ ಡೀಸೆಲ್ ದರ 100 ರೂಪಾಯಿ 12 ಪೈಸೆಗೆ ಏರಿಕೆ ಕಂಡಿದೆ. ಇದು ಈವರೆಗೆ ರಾಜ್ಯದಲ್ಲಿ ಏರಿಕೆ ಕಂಡ ದಾಖಲೆಯ ದರ ಎಂದು ಹೇಳಲಾಗಿದೆ.

ಇಂದು ಪ್ರತಿ ಲೀಟರ್ ದರ 97 ರೂಪಾಯಿ 35 ಪೈಸೆ ಇತ್ತು. ಒಂದೇ ದಿನಕ್ಕೆ ಅದು 37 ಪೈಸೆಯಷ್ಟು ಹೆಚ್ಚಳವಾಗಿದೆ. ಪೆಟ್ರೋಲ್ ದರ ಕೂಡ 109 ರೂಪಾಯಿ 71 ಪೈಸೆ ಏರಿಕೆಯಾಗಿದೆ.ಹಿಂದಿನ ದಿನಕ್ಕೆ ಹೋಲಿಸಿದರೆ 30 ಪೈಸೆಯಷ್ಟು ಹೆಚ್ಚಳವಾಗಿದೆ. ಪ್ರತಿದಿನ ನಗರದಲ್ಲಿ ಪೆಟ್ರೋಲ್, ಡೀಸೆಲ್ ದರ ಸರಾಸರಿ ಮೂವತ್ತು ಪೈಸೆ ಹೆಚ್ಚಳವಾಗುತ್ತಿದೆ.

ಆದರೆ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಮಾತ್ರ ಪೆಟ್ರೋಲ್ 109 ರೂಪಾಯಿ 30 ಪೈಸೆ,ಡೀಸೆಲ್ 99 ರೂಪಾಯಿ 79 ಪೈಸೆ ದರ ಏರಿಕೆ ಕಂಡಿದೆ.ದುಬಾರಿ ಸಾಗಾಟ ವೆಚ್ಚ ಡೀಸೆಲ್ ದರ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಮಂಗಳೂರಿನಿಂದ ಪೆಟ್ರೋಲ್, ಡೀಸೆಲ್ ಪೂರೈಕೆ ಆಗುತ್ತಿದೆ.ಸಾಗಾಣಿಕೆ ವೆಚ್ಚ ಹೆಚ್ಚಳವಾಗುವ ಕಾರಣಕ್ಕೆ ಉಳಿದ ಕಡೆಗಿಂತ ದರ ಹೆಚ್ಚಳಕ್ಕೆ ಕಾರಣವಾಗಿದೆ. ಕಾರವಾರಕ್ಕೆ ಬೆಳಗಾವಿ ಕಡೆಯಿಂದ ಪೆಟ್ರೋಲ್, ಡೀಸೆಲ್ ಪೂರೈಕೆಯಾಗುತ್ತದೆ. ಹೀಗಾಗಿ ಇಲ್ಲಿ ದರ ಕಡಿಮೆ ಇದೆ. ರಾಜ್ಯದಲ್ಲಿ ಅತೀ ಹೆಚ್ಚು ದರವು ಶಿರಸಿ ಹಾಗೂ ಬಳ್ಳಾರಿ ಭಾಗದಲ್ಲಿ ಮಾತ್ರ ದಾಖಲಾಗಿದೆ. ಆದರೆ ಇದೀಗ ಏಕಾ ಏಕಿ ಡೀಸೆಲ್ ದರ ನೂರರ ಗಡಿ ದಾಟಿರುವುದು ವಾಹನ ಸವಾರರನ್ನು ಬೆಚ್ಚಿ ಬೀಳಿಸಿದೆ.

Related Articles

Leave a Reply

Your email address will not be published. Required fields are marked *

Back to top button