Uncategorized

42 ಲಕ್ಷ ರೂ.ಲಪಟಾಯಿಸಿದ ಶಿರಸಿ ವ್ಯಕ್ತಿಯ ಬಂಧನ

ಕಾರವಾರ : ವ್ಯಕ್ತಿಯೋರ್ವನ ಗಮನವನ್ನು ಬೇರೆಡೆ ಸೆಳೆದು 42 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದಲ್ಲಿ ದಾಖಲಾಗಿದ್ದ ದೂರಿನನ್ವಯ ಅಲ್ಲಿನ ಪೊಲೀಸರು ಶಿರಸಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಮೊಹಮದ್ ಇಬ್ರಾಹಿಂ ಕಲಬುರ್ಗಿ ಯಾನೆ ರೆಡ್ಡಿ (45) ಎಂಬಾತನಾಗಿದ್ದಾನೆ.ಕಾರ್ ಬ್ರೋಕರ್ ಆಗಿರುವ ಮೊಹಮದ್ ಶಿರಸಿ ತಾಲೂಕಿನ ರಾಮನಬೈಲ್ ನಿವಾಸಿಯಾಗಿದ್ದಾನೆ.

ಆರೋಪಿಯ ಪತ್ತೆಗೆ ಶಿರಸಿ ಡಿವೈಎಸ್ಪಿ ರವಿ‌ ನಾಯ್ಕ,ಸಿಪಿಐ ರಾಮಚಂದ್ರ‌ ನಾಯಕ ಮಾರ್ಗದರ್ಶನದಲ್ಲಿ ಸಹಕಾರ ನೀಡಿದರ ಪರಿಣಾಮ ಆರೋಪಿ ಪೊಲೀಸರಿಗೆ ಸಿಕ್ಕಿದ್ದು,ತೆಲಂಗಾಣ ಪೊಲೀಸರು ಶಿರಸಿ ಪೊಲೀಸರ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Related Articles

Leave a Reply

Your email address will not be published.

Back to top button