Uncategorized
ನ್ಯೂಜಿಲೆಂಡ್ಗೆ ಸುಲಭ ಜಯ
ಶಾರ್ಜಾ: ನಮೀಬಿಯಾ ವಿರುದ್ಧ 52 ರನ್ ಅಂತರದಲ್ಲಿ ಜಯ ಗಳಿಸಿದ ನ್ಯೂಜಿಲೆಂಡ್ ತಂಡ ಟಿ20 ವಿಶ್ವಕಪ್ ನಲ್ಲಿ ಸೆಮಿಫೈನಲ್ ತಲಪುವ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನಮೀಬಿಯಾ ತಂಡ ಕಿವೀಸ್ ಪಡೆಯನ್ನು 163 ರನ್ ಗೆ ಅವಕಾಶ ಮಾಡಿಕೊಟ್ಟಿತು. ಇದಕ್ಕೆ ಉತ್ತರವಾಗಿ ನಮೀಬಿಯಾ ಕೇವಲ 111 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಅಜೇಯ 35 ಮತ್ತು 1 ವಿಕೆಟ್ ಗಳಿಸಿದ ಜೇಮ್ಸ್ ನೀಶಾಮ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಮುಂದಿನ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಿವೀಸ್ ಜಯ ಗಳಿಸಿದರೆ ಯಾವುದೇ ರನ್ ಸರಾಸರಿಯ ಗೊಂದಲ ಇಲ್ಲದೆ ಸೆಮಿಫೈನಲ್ ಪ್ರವೇಶಿಸಲಿದೆ.