Uncategorized

ಮೈಸೂರು ಮೃಗಾಲಯಕ್ಕೆ ಎರಡು ಹೊಸ ಅತಿಥಿಗಳ ಸೇರ್ಪಡೆ

ಮೈಸೂರು ; ಮೈಸೂರು ಮೃಗಾಲಯಕ್ಕೆ ಜರ್ಮನಿ, ಸಿಂಗಪೂರ್ ಹಾಗೂ ಮಲೇಶಿಯಾದಿಂದ ಹೊಸ ಅತಿಥಿಗಳು ಆಗಮಿಸಿದ್ದಾರೆ.

ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯಕ್ಕೆ ಬಂದಿಳಿದಿರುವ ಎರಡು ಗಂಡು ಗೋರಿಲ್ಲಾಗಳು ಟಬ್ಬೊ (14 ವರ್ಷ), ಡಂಬೋ (8 ವರ್ಷ) ಜರ್ಮನಿಯಿಂದ ಕೊಡುಗೆಯಾಗಿ ಬಂದಿವೆ.

ಮೃಗಾಲಯದಲ್ಲಿ ಇನ್ಫೋಸಿಸ್‌ ನಿರ್ಮಿಸಿರುವ ಆವರಣದಲ್ಲಿ ಅತಿಥಿಗಳಿಗೆ ಆರೈಕೆ ಮಾಡುತ್ತಿದ್ದು, ಮಲೇಷಿಯಾ, ಸಿಂಗಪೂರ್‌ನಿಂದ ತಲಾ 2 ಗೋರಿಲ್ಲಾಗಳು ಆಗಮಿಸಿವೆ.

ಮಲೇಶಿಯಾದ ಮಾರ್ಲಿನ್ (ಗಂಡು- 16 ವರ್ಷ), ಅಟೀನಾ (ಹೆಣ್ಣು- 12 ವರ್ಷ), ಸಿಂಗಪೂರ್‌ನ ಆಫಾ (ಗಂಡು- 7 ವರ್ಷ), ಮಿನಿ (ಹೆಣ್ಣು- 5 ವರ್ಷ) ಮೈಸೂರು ಮೃಗಾಲಯದಲ್ಲಿ ಆಶ್ರಯ ಪಡೆದುಕೊಂಡಿವೆ.

15 ದಿನಗಳ ಹಿಂದೆಯೇ ಈ ವಿದೇಶಿ ಅತಿಥಿಗಳ ಆಗಮನವಾಗಿದ್ದು, ಕೋವಿಡ್‌ ಹಿನ್ನಲೆ ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿರುವ ಇರಿಸಲಾಗಿದೆ.

Related Articles

Leave a Reply

Your email address will not be published.

Back to top button