ಧಾರವಾಡದ ಆಯಟ್ಟಿಯಲ್ಲಿ ವ್ಯಕ್ತಿ ಹತ್ಯೆ; ಬೆಚ್ಚಿಬಿದ್ದ ಗ್ರಾಮಸ್ಥರು
ಧಾರವಾಡ: ಗ್ರಾಮಸ್ಥರೆಲ್ಲರೂ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಇದ್ದ ಸಂದರ್ಭದಲ್ಲಿಯೇ, ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಆಯಟ್ಟಿ ಗ್ರಾಮದಲ್ಲಿ ನಡೆದಿದೆ.
ವಿರುಪಾಕ್ಷಪ್ಪ ಆಚಮಟ್ಟಿ (58) ಕೊಲೆಯಾದ ವ್ಯಕ್ತಿಯಾದ ವ್ಯಕ್ತಿಯಾಗಿದ್ದಾನೆ. ಆಯಟ್ಟಿ ಗ್ರಾಮದ ಲಕ್ಷಣ ಈ ಕೊಲೆ ಮಾಡಿದ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಇನ್ನೂ ವಿರುಪಾಕ್ಷಪ್ಪನ ಕೊಲೆಯ ಸುದ್ದಿ ಗ್ರಾಮದಲ್ಲಿ ತಿಳಿದು ತಿಳಿದು ಗ್ರಾಮಸ್ಥರು ಬೆಚ್ಚಿ ಬಿದಿದ್ದಾರೆ.
ಕಳೆದ ಹಲವು ವರ್ಷಗಳಿಂದ ಇಬ್ಬರ ನಡುವೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಇತ್ತು ಎಂದು ಹೇಳಲಾಗುತ್ತಿದೆ. ಆದರೆ ಇಬ್ಬರೂ ಮುಖಾಮುಖಿಯಾದ ವೇಳೆ ಮಾತಿಗೆ ಮಾತು ಬೆಳೆದು ಈ ಹಿಂದಿನಿಂದಲೂ ಗಲಾಟೆ ನಡೆದುಕೊಂಡು ಬಂದಿದ್ದು, ಆದರೆ ಕಳೆದ ದಿನ ಇಬ್ಬರು ಮುಖಾಮುಖಿ ಆದ ಸಂದರ್ಭದಲ್ಲಿ ಮತ್ತೆ ಗಲಾಟೆ ನಡೆದು, ಮಾತಿಗೆ ಮಾತು ಬೆಳೆದು ಅದು ವಿಕೋಪಕ್ಕೆ ತಿರುಗಿ ಲಕ್ಷ್ಮಣ, ವಿರೂಪಾಕ್ಷನಿಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಕೊಲೆ ಮಾಡಿದ ನಂತರ ಆರೋಪಿ ಲಕ್ಷ್ಮಣ ಸ್ಥಳದಿಂದ ಪರಾರಿಯಾಗಿದ್ದು, ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ನವಲಗುಂದ ಠಾಣೆಯ ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.