ಅರ್ಬಾಜ್ ಕೊಲೆ ಕೇಸ್ ತನಿಖೆ ಬೇಗ ಪೂರ್ಣವಾಗಲಿ; ಗಡಿನಾಡು ಕನ್ನಡ ಸಂಘ ಆಗ್ರಹ
ಬೆಳಗಾವಿ: ಅರ್ಬಾಜ್ ಕೊಲೆ ಪ್ರಕರಣದ ನಂತರ ಖಾನಾಪುರ ಪಟ್ಟಣ ಸೂಕ್ಷ್ಮ ಪ್ರದೇಶವಾಗಿದ್ದು, ಲ್ಪಸಂಖ್ಯಾತರಿಗೆ ಸುರಕ್ಷೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ RSS ನಂತಹ ದೊಡ್ಡ ಸಂಘಟನೆ ಖಾನಪುರದಲ್ಲಿ ಪಥ ಸಂಚಲನ ನಡೆಸಿರುವುದು ಭಯದ ವಾತಾವರಣ ಸೃಷ್ಟಿ ಮಾಡುವ ಕೃತ್ಯ ಎಂದು ಗಡಿನಾಡು ಕನ್ನಡ ಸಂಘದ ಅಧ್ಯಕ್ಷ ಹಾಗೂ ಅಲ್ಪ ಸಂಖ್ಯಾತ ಮುಖಂಡ ಸಯ್ಯದ್ ಮನ್ಸೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀರಾಮನ ಹೆಸರಿನಲ್ಲಿ ಕೆಲವು ದುಷ್ಟರು ಇಂತಹ ಕೃತ್ಯಗಳನ್ನು ಎಸಗುತ್ತಿದ್ದು, ಇವರನ್ನ ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು. ಅರ್ಬಾಜ್ ಸಾವು ಸಹಜವಲ್ಲ, ಕೊಲೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಅರ್ಬಾಜ್ ತಾಯಿ ಹೇಳಿಕೆ ನೀಡಿದ್ದಾರೆ. ಸುದ್ದಿ ವಾಹಿನಿಗಳು ಶ್ರೀ ರಾಮಸೇನೆ ಹಿಂದೂಸ್ತಾನ ಸಂಘಟನೆಯ ಕೆಲವರು ಭಾಗಿಯಾಗಿದ್ದಾರೆ ಎಂದು ಆರೋಪಿಸುತ್ತಿವೆ. ಶೀಘ್ರವೇ ಪೊಲೀಸರು ಆರೋಪಿಗಳನ್ನು ಬಂಧಿಸಬೇಕು ಎಂದು ಮನವಿ ಮಾಡಿದರು.
ಸದ್ಯ ಅರ್ಬಾಜ್ ಕೇಸ್ ಖಾನಾಪುರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದು, ಜಿಲ್ಲಾ ಪೊಲೀಸರು ಹಲವು ತಂಡಗಳಾಗಿ ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನ ಬಂದಿಸುತ್ತೇವೆ ಎಂದು ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ