Uncategorized

ಗೆದ್ದು ನಿರ್ಗಮಿಸಿದ ಮುಂಬೈ ಇಂಡಿಯನ್ಸ್

ದುಬೈ: ಪ್ಲೇ ಆಫ್ ತಲುಪಬೇಕಾದರೆ 171 ರನ್ ಅಂತರದಲ್ಲಿ ಜಯ ಕಾಣಬೇಕಾಗಿದ್ದ ಮುಂಬೈ ಇಂಡಿಯನ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 42 ರನ್ ಅಂತರದಲ್ಲಿ ಜಯ ಗಳಿಸಿ ಗೌರವದೊಂದಿಗೆ ನಿರ್ಗಮಿಸಿದೆ.

236 ರನ್ ಗಳ ಬೃಹತ್ ಮೊತ್ತವನ್ನು ಬೆಂಬತ್ತಿದ ಹೈದರಾಬಾದ್ 193 ರನ್ ಗೆ ತೃಪ್ತಿಗೊಂಡಿತು. ಮನೀಶ್ ಪಾಂಡೆ 69 ರನ್ ಗಳಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಮುಂಬೈ ಇದುವರೆಗೂ ಐಪಿಎಲ್ ನಲ್ಲಿ ಚಾಂಪಿಯನ್ ಪಟ್ಟ ಹೊರತುಪಡಿಸಿದರೆ ಐದನೇ ಸ್ಥಾನ ಕಾಯ್ದುಕೊಳ್ಳುತ್ತಿತ್ತು, ಈ ಬಾರಿಯೂ ಐದನೇ ಸ್ಥಾನ ಗಳಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ತಂಡ ಇಶಾನ್ ಕಿಶನ್ (84) ಮತ್ತು ಸೂರ್ಯ ಕುಮಾರ್ ಯಾದವ್ (82) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ 235 ರನ್ ಗಳಿಸಿತು. ರನ್ ಸರಾಸರಿಯಲ್ಲಿ ಕೆಕೆಆರ್ ಹಿಂದಿಕ್ಕಿ ಪ್ಲೇ ಆಫ್ ತಲುಪಬೇಕಾದರೆ ಹೈದರಾಬಾದ್ ತಂಡವನ್ನು 65 ಅಥವಾ ಅದಕ್ಕಿಂತ ಕಡಿಮೆ ರನ್ ಅಂತರದಲ್ಲಿ ಸೋಲಿಸಬೇಕಾಗಿತ್ತು. ಆದರೆ ಹೈದರಾಬಾದ್ 193 ರನ್ ಗಳಿಸಿ ದಿಟ್ಟ ಸವಾಲಿನೊಂದಿಗೆ ಸೋಲೊಪ್ಪಿಕೊಂಡಿತು.
ಇಶಾನ್ ಕಿಶಾನ್ ಪಂದ್ಯಶ್ರೇಷ್ಠರೆನಿಸಿದರು.

Related Articles

Leave a Reply

Your email address will not be published.

Back to top button