Uncategorized

ದೇವನಹಳ್ಳಿ ಶಾಸಕರು ಶಿಷ್ಟಾಚಾರ ಪಾಲಿಸುತ್ತಿಲ್ಲ: ಕೊಯಿರಾ ಗ್ರಾಮ ಪಂಚಾಯಿತಿ ಆಡಳಿತದ ಆರೋಪ

ಕುಂದಾಣ: ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲ್ಲೂಕು ಕುಂದಾಣ ಹೋಬಳಿ ವ್ಯಾಪ್ತಿಯ ಮೀಸಗಾನಹಳ್ಳಿ, ಅರುವನ ಹಳ್ಳಿ, ಬಚ್ಚಹಳ್ಳಿಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಅವರು ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.

ಕುಂದಾಣ ಹೋಬಳಿಯ ಕೊಯಿರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕರ ನೇತೃತ್ವದಲ್ಲಿ ನಡೆಸುವ ಸರಕಾರಿ ಕಾರ‍್ಯಕ್ರಮಗಳನ್ನು ಆಯೋಜಿಸುವ ಸಂದರ್ಭದಲ್ಲಿ ಪಂಚಾಯಿತಿ ಆಡಳಿತಕ್ಕೆ ಮಾಹಿತಿ ನೀಡದೆ ಶಾಸಕರು ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಅರುವನಹಳ್ಳಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದ ಶಂಕುಸ್ಥಾಪನೆಗೆ ಬಂದ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಅವರನ್ನು ಪಂಚಾಯಿತಿ ಅಧ್ಯಕ್ಷೆ ರಮ್ಯಾ ಶ್ರೀನಿವಾಸ್ ಮತ್ತು ಉಪಾಧ್ಯಕ್ಷ ವಿಜಯ್ ಕುಮಾರ್ ಸೇರಿದಂತೆ ಸದಸ್ಯರುಗಳು ಇಂದಿನ ಕಾರ್ಯಕ್ರಮದ ಬಗ್ಗೆ ಯಾರಿಗೆ ಮಾಹಿತಿ ನೀಡಿದ್ದೀರಿ ಪೋನ್ ಮಾಡಿದ್ದಾಗಲಿ, ವಾಟ್ಸಪ್ ಮಾಡಿದ್ದಾಗಲಿ, ಅಥವಾ ಯಾವುದೇ ರೀತಿಯಲ್ಲಿ ತಿಳಿಸಿದ್ದ ಬಗ್ಗೆ ಹೇಳಿ ನೀವು ಒಂದು ಪಕ್ಷಕ್ಕೆ ಸೇರಿದ ಶಾಸಕರಲ್ಲ ಇಡೀ ತಾಲೂಕಿನ ಶಾಸಕರಾಗಿದ್ದೀರಿ ಎಂಬುವುದನ್ನು ತಿಳಿದುಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡರು.

ಕಾರ್ಯಕ್ರಮಗಳ ಬಗ್ಗೆ ಪಂಚಾಯಿತಿಗಳಿಗೆ ತಿಳಿಸುವ ಕೆಲಸ ನನ್ನದಲ್ಲ ಅದು ಅಧಿಕಾರಿಗಳ ಕೆಲಸ ಯಾಕೆ ಹೀಗಾಗಿದೆ ಎಂದು ನೋಡುತ್ತೇನೆ ಎಲ್ಲೋ ತಪ್ಪಾಗಿದೆ ಈಗ ಎಲ್ಲರು ಸೇರಿ ಕಾರ್ಯಕ್ರಮ ಮಾಡೋಣ ಎಂದು ಆಕ್ರೋಶಗೊಂಡ ಕೊಯಿರಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಸಮಾಧಾನ ಪಡಿಸಲು ಶಾಸಕರು ಪ್ರಯತ್ನಿಸಿದರು ಇದರಿಂದ ಸಮಾಧಾನಗೊಳ್ಳದ ಗ್ರಾಮ ಪಂಚಾಯಿತಿ ಸದಸ್ಯರುಗಳು ಕಾರ್ಯಕ್ರಮವನ್ನು ನೀವೇ ಮಾಡಿಕೊಳ್ಳಿ ಎಂದು ಕಾರ್ಯಕ್ರಮವನ್ನು ಬಹಿಷ್ಕರಿಸಿದರು. ಪಂಚಾಯಿತ ಅಧ್ಯಕ್ಷರು ಮಾತ್ರ ಸ್ಥಳದಲ್ಲೇ ಇದ್ದರು ಗೊಂದಲದಿಂದಲೇ ಕಾರ್ಯಕ್ರಮ ಮುಗಿಯಿತು.

ಈ ಹಿಂದೆಯೂ ನಾಲ್ಕೈದು ಸರ್ಕಾರಿ ಕಾರ್ಯಕ್ರಮಗಳಿಗೆ ಪಂಚಾಯಿತಿಗಾಗಲಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗಾಗಲಿ ಮಾಹಿತಿ ನೀಡಿಲ್ಲ ಅಧಿಕಾರಿಗಳು ತಪ್ಪು ಮಾಡಿದ್ದಾರೆ ಎಂದು ಸಮಜಾಯಿಷಿ ನೀಡುವ ಶಾಸಕರು ಅಧಿಕಾರಿಗಳು ತಪ್ಪು ಮಾಡಿದ್ದರೆ ಈ ರೀತಿ ಪದೆ ಪದೆ ಯಾಕೆ ಆಗುತ್ತಿದೆ ಶಾಸಕರ ಮಾತು ಕೇಳದ ಅಧಿಕಾರಿಗಳ ಮೇಲೆ ಶಾಸಕರು ಏನು ಕ್ರಮ ಕೈಗೊಂಡಿದ್ದಾರೆ ಎಂದು ಕೊಯಿರಾ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಪ್ರಶ್ನಿಸಿದ್ದಾರೆ.

Related Articles

Leave a Reply

Your email address will not be published.

Back to top button