Uncategorized

ಮಾಜಿ ಸಿಎಂ ಸಿದ್ದರಾಮಯ್ಯ ನವರಿಗೆ ಮತಿಭ್ರಮಣೆಯಾಗಿದೆ: ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್

ಕಲಬುರಗಿ: ಅಧಿಕಾರವನ್ನು ಕಳೆದುಕೊಂಡು ಕಾಂಗ್ರೆಸ್ ಪಕ್ಷ ಹುಚ್ಚರಂತೆ ವತಿ೯ಸುತ್ತಿದ್ದು, ಪೂವ೯ಗ್ರಹ ಪೀಡಿತರಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಅವರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮತಿಭ್ರಮಣೆಯಾಗಿದೆ ಎಂದು ಬಿಜೆಪಿ ಶಾಸಕ ರಾಜಕುಮಾರ್ ಪಾಟೀಲ್ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸಿದ್ದರಾಮಯ್ಯ ಸೇರಿದಂತೆ ಇಡೀ ಕಾಂಗ್ರೆಸ್ ಪಕ್ಷ ಆರ್ ಎಸ್.ಎಸ್. ಹಾಗೂ ದೇಶದ ಪ್ರಧಾನಿ ಬಗ್ಗೆ ಎಕ ವಚನದಲ್ಲಿ ಮಾತನಾಡುತ್ತಿದ್ದು, ಸಿದ್ದರಾಮಯ್ಯ ನವರು ಒಂದು ಬಾರಿ ಹುಚ್ಚಾಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಂಡು ಬರಬೇಕೆಂದರು.

ಅಧಿಕಾರವಿಲ್ಲದೆ, ಕಾಂಗ್ರೆಸ್ ಪಕ್ಷದ ನಾಯಕರು ಹಚ್ಚರಂತೆ ಹಫ ಹಫಿಸುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ನಾಯಕರ ಎಕ ವಚನದ ಹೇಳಿಕೆಗಳು ಮುಂದುವರೆದರೇ, ಸಿದ್ದರಾಮಯ್ಯ ಸೇರಿದಂತೆ ಕೈ ನಾಯಕರ ಕಾಯ೯ಕ್ರಮಗಳಿಗೆ ಮುತ್ತಿಗೆ ಹಾಕಲಾಗುವುದು ಎಂದರು.

ವಿಶ್ವದ ಅತಿ ದೊಡ್ಡ ಸಂಘಟನೆ ಆರೆಸ್ಸೆಸ್. ಈ ಒಂದು ಸಂಘಟನೆಯನ್ನು ದೇಶದ ಮೋದಲನೇ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಗಣರಾಜ್ಯೋತ್ಸವ ಅಂಗವಾಗಿ ಪಥ ಸಂಚಲನ ಮಾಡಲು ಆಹ್ವಾನ ನೀಡಿದ್ದರು. ಆದರೆ ಅವರದೇ ಪಕ್ಷದ ನಾಯಕರು ಅಂತಹ ಸಂಘಟನೆ ಬಗ್ಗೆ ಈ ಪರಿಯಾಗಿ ಹಗುರವಾಗಿ ಮಾತನಾಡುವುದು ನಿಲ್ಲಿಸಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರು ಆರೆಸ್ಸೆಸ್ ಹಾಗೂ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಿ ಅವರ ಪಕ್ಷದ ಆವನತಿಗೆ ಅವರೇ, ಕಾರಣವಾಗುತ್ತಿದ್ದಾರೆ ಎಂದರು.

ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಅಧೋಗತಿಗೆ ತಲುಪಿದೆ. ಅಲ್ಪ ಸಂಖ್ಯಾತ, ಹಿಂದೂಳಿದ ಹಾಗೂ ದಲಿತರ ವಿಶ್ವಾಸವನ್ನು ಈಗಾಗಲೇ ಕಳೆದುಕೊಂಡು ಹಿನಾಯ ಸ್ಥಿತಿಗೆ ಬಂದಿದೆ ಎಂದ ಅವರು, ಹೇಳಿಕೆ ಕೊಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಎಂಬ ನಾಲ್ಕು ಬಣಗಳು ಉದ್ಬವಿಸಿವೆ. ಆವರಲ್ಲೇ ಒಬ್ಬರ ಮೇಲೆ ಒಬ್ಬರು ಅಸಮಾಧಾನ ಇದೆ. ಹೀಗಾಗಿ ತಮ್ಮ ಮನೆಯ ಅಂಗಳವನ್ನು ಮೊದಲ ಸರಿಮಾಡಿಕೊಂಡು, ನಮ್ಮ ಅಂಗಳಕ್ಕೆ ಬರಲಿ ಎಂದರು.

Related Articles

Leave a Reply

Your email address will not be published.

Back to top button