Uncategorized

ಬಡತನದಲ್ಲಿದ್ದ ವಿದ್ಯಾರ್ಥಿನಿಯರಿಗೆ ಮೊಬೈಲ್‌ ಕೊಡಿಸಿದ ಶಾಸಕ ಎಂ ಪಿ ರೇಣುಕಾಚಾರ್ಯ…!

ದಾವಣಗೆರೆ: ಆ ವಿದ್ಯಾರ್ಥಿನಿಯರು ಕಡು ಬಡತನದಲ್ಲಿ ಇದ್ದವರು. ಮೊಬೈಲ್ ಖರೀದಿಸಲು ಕಷ್ಟವಾಗಿತ್ತು. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಅವರಿಗೆ ಮನೆಯವರು ಮೊಬೈಲ್ ಕೊಡಿಸಲು ಆಗಿರಲಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಕಷ್ಟದಲ್ಲಿದ್ರು. ಇವರಿಗೆ ಮೊಬೈಲ್‌‌ ಕೊಡಿಸುವ ಭರವಸೆ ನೀಡಿದ್ದ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರು ಇದೀಗ ಈಡೇರಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಮೊಬೈಲ್ ನೀಡುವ ಮೂಲಕ ಮಾನವೀಯತೆ ಮೆರದ ರೇಣುಕಾಚಾರ್ಯ ಅವರು ಹೊನ್ನಾಳಿಬತಾಲೂಕಿನ ಟಿ.ಗೋಪಗೊಂಡನಹಳ್ಳಿ ಗ್ರಾಮದ‌ ಬಿಂದು, ಸುಂಕದಕಟ್ಟೆ ಗ್ರಾಮದ ನರ್ಮದಾಗೆ ಮೊಬೈಲ್ ಅನ್ನು ವೈಯಕ್ತಿಕ ಹಣದಲ್ಲಿ ಖರೀದಿಸಿ ನೀಡಿದ್ದಾರೆ.

ಕಡು ಬಡ ಕುಟುಂಬವಾಗಿದ್ದು ಸ್ಮಾರ್ಟ್ ಫೋನ್ ಇಲ್ಲದೇ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿನಿಯರು ರೇಣುಕಾಚಾರ್ಯ ಅವರ ಬಳಿ ಅಳಲು ತೋಡಿಕೊಂಡಿದ್ದರು‌. ಈ ವೇಳೆ ವಿದ್ಯಾರ್ಥಿನಿಯರಿಗೆ ಮೊಬೈಲ್ ಕೊಡಿಸುವುದಾಗಿ ಭರವಸೆ ನೀಡಿದ್ದರು ರೇಣುಕಾಚಾರ್ಯ. ಕೊಟ್ಟ ಮಾತಿನಂತೆ ಇಂದು ಮೊಬೈಲ್ ನೀಡಿದ ರೇಣುಕಾಚಾರ್ಯ ‌ಅವರಿಗೆ ವಿದ್ಯಾರ್ಥಿನಿಯರು ಕೃತಜ್ಞತೆ ಸಲ್ಲಿಸಿದರು‌. ಇನ್ನು ಮುಂಬರುವ ದಿನಗಳಲ್ಲಿ ಉತ್ತಮವಾಗಿ ಅಭ್ಯಾಸ ಮಾಡುತ್ತೇವೆ. ಹೊನ್ನಾಳಿ ಶಾಸಕರಿಗೆ ಋಣಿಯಾಗಿರುತ್ತೇವೆ ಎಂದು ಹೇಳಿದರು.

Related Articles

Leave a Reply

Your email address will not be published.

Back to top button