ಅಪ್ರಾಪ್ತೆ ಮೇಲೆ ಬಾಲಕಿ ಮೇಲೆ ಅತ್ಯಾಚಾರ; 52 ಮಂದಿ ಆರೋಪಿಗಳಿಗೆ ಜೈಲು
ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿಯಲ್ಲಿ 52 ಮಂದಿ ಆರೋಪಿಗಳು ಜೈಲು ಪಾಲಾಗಿದ್ದು, ಪ್ರತ್ಯೇಕ ಆರೋಪಪಟ್ಟಿ ಸಲ್ಲಿಕೆಯಾಗಿದೆ.
ಮಕ್ಕಳ ರಕ್ಷಣಾ ಘಟಕ ಹಾಗೂ ಮಾಧ್ಯಮಗಳ ವಿಶೇಷ ಕಾಳಜಿಯ ಫಲವಾಗಿ ಬೆಳಕಿಗೆ ಬಂದ ಈ ಪ್ರಕರಣದ ಮುಖ್ಯ ಆರೋಪಿ ಬಾಲಕಿಯ ತಾಯಿಯೇ ಎಂಬುದು ಗಮನಾರ್ಹ. ಉಳಿದಂತೆ ಶೃಂಗೇರಿ ಸುತ್ತಮುತ್ತಲಿನ ಪಡ್ಡೆ ಹುಡುಗರೇ ಅಧಿಕ. ಅದರಲ್ಲೂ ಸಾಕಷ್ಟು ಸಂಖ್ಯೆಯʼ ಕೇಸರಿಪಡೆʼಯ ವೀರರು ಇದ್ದಾರೆ ಅಲ್ಲದೆ, ಶೃಂಗೇರಿ ಠಾಣೆಯ ವೃತ್ತ ನಿರೀಕ್ಷಕ ಪ್ರಕರಣವನ್ನು ಹಳ್ಳ ಹಿಡಿಸಲು ಯತ್ನಿಸಿದ್ದಾರೆಂಬ ಆರೋಪವಿದ್ದು, ಇದು ನಡೆ ಸಾಕಷ್ಟು ಟೀಕೆಗೆ ಗುರಿಯಾಗಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆಯೂ ನಡೆದಿತ್ತು.
ತನಿಖಾಧಿಕಾರಿಯಾಗಿದ್ದ ವೃತ್ತ ನಿರೀಕ್ಷಕರ ವರ್ಗಾವಣೆ ಮಾಡಲಾಯಿತು. ತನಿಖೆಯ ಹೊಣೆ ಹೆಚ್ಚುವರಿ ರಕ್ಷಣಾಧಿಕಾರಿ ಶೃತಿ ಹೆಗಲಿಗೆ ಬಿತ್ತು. ನಂತರ ಒಂದರ ಹಿಂದೊಬ್ಬರಂತೆ ಆರೋಪಿಗಳ ಸಂಖ್ಯೆ ಬೆಳೆಯುತ್ತಾ ಹೋಯಿತು. ಈವರೆಗೆ 52 ಆರೋಪಿಗಳನ್ನು ಬಂಧಿಸಿ, ಎಲ್ಲರ ವಿರುದ್ಧವೂ ಪ್ರತ್ಯೇಕ ಆರೋಪಪಟ್ಟಿ ಸಲ್ಲಿಸಲಾಗಿದೆ. ಜಾಮೀನು ಪಡೆಯಲು ಆರೋಪಿಗಳು ಹೈಕೋರ್ಟ್ ನಲ್ಲಿ ಯತ್ನಿಸುತ್ತಿದ್ದಾರೆ.