Uncategorized

ಬ್ರಿಟನ್‌ವರು ಕಾಂಗ್ರೆಸ್ ಪಕ್ಷ ಸ್ಥಾಪಿಸಿ ತಮ್ಮ ಕುತಂತ್ರ ಬುದ್ದಿ ಕೊಟ್ಟು ಹೋಗಿದ್ದಾರೆ: ಆರ್ ಅಶೋಕ್​​​​​​​​​​

ಕಲಬುರಗಿ: ಕಾಂಗ್ರೆಸ್ ಪಕ್ಷ ಸ್ಥಾಪನೆ ಮಾಡಿದ್ದು ಬ್ರಿಟನ್‌ನವರು. ದೇಶ ಬಿಟ್ಟು ಹೋಗುವಾಗ ತಮ್ಮ‌ ಕುತಂತ್ರ ಬುದ್ದಿಯನ್ನು ಕಾಂಗ್ರೆಸ್‌ ಪಕ್ಷದಲ್ಲಿ ಬಿಟ್ಟು ಹೋಗಿದ್ದಾರೆ. ಹೀಗಾಗಿ ದೇಶದಲ್ಲಿ ಜಿ 23 ಕುತಂತ್ರ ಮಾಡಿದ್ರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಕುತಂತ್ರ ಮಾಡುತ್ತಿದ್ದಾರಷ್ಟೆ ಅಂತ ಕಂದಾಯ ಸಚಿವ ಆರ್ ಅಶೋಕ್​​ ಹೇಳಿದ್ದಾರೆ.

ಭೂಕಂಪನದಿಂದ ತಲ್ಲಣಗೊಂಡ ಕಲಬುರಗಿ ಜಿಲ್ಲೆ ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಅಶೋಕ್ ಮಾತನಾಡಿದ ಅವರು, ದೇಶದಲ್ಲಿ ಜಿ 23 ಹೆಸರಿನಲ್ಲಿ 23 ಜನ ಬುದ್ದುವಂತರು ಕುತಂತ್ರ ನಡೆಸುತ್ತಿದ್ದಾರೆ. ಇತ್ತ ರಾಜ್ಯದಲ್ಲಿ ಸಿದ್ದರಾಮಯ್ಯ ಕುತಂತ್ರ ನಡೆಸುತ್ತಾರೆ. ಡಾ. ಜಿ ಪರಮೇಶ್ವರ್ ಅಂತ ಒಳ್ಳೆ ವ್ಯಕ್ತಿಯನ್ನು ಸಹ ಬಿಡದೆ ಸೋಲಿಸಿದ ಕುತಂತ್ರಿ ಪಕ್ಷ ಅದು ಅಂತ ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಿದ್ದಾರೆ. ಪದೇಪದೇ 120 ವರ್ಷದ ಪಾರ್ಟಿ ಅಂತ ಹೇಳುವ ಕಾಂಗ್ರೆಸ್‌ನವರಿಗೆ ಲೋಕಸಭಯಲ್ಲಿ 20 ಸೀಟು ಗೆಲ್ಲಲು ಆಗಲಿಲ್ಲ, ಲೋಕಸಭೆ ವಿರೋಧ ಪಕ್ಷದ ನಾಯಕ ಸ್ಥಾನ ಕೂಡ ಉಳಿಸಿಕೊಳ್ಳಲು ಆಗಲಿಲ್ಲ, ಹೀನಾಯಸ್ಥೀತಿಯಲ್ಲಿದ್ದರೂ ಬುದ್ದಿ ಬಂದಿಲ್ಲ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಲಾಲು ಪ್ರಸಾಧ ಪಾರ್ಟಿನೋ ಅಥವಾ ಯಾವುದಾದರೂ ಪ್ರಾದೇಶಿಕ ಪಾರ್ಟಿ ಜೊತೆನೋ ಕಾಂಗ್ರೆಸ್ ಪಕ್ಷವನ್ನು ವಿಲೀನ ಮಾಡಿಕೊಂಡ್ರೆ ಒಳ್ಳೆಯದು. ಕಡೆ ಪಕ್ಷ ಪ್ರಾದೇಶಿಕ ಪಕ್ಷವಾಗಿಯಾದ್ರೂ ಬದುಕಬಹುದು ಅಂತ‌ ಲೇವಡಿ ಮಾಡಿದರು.

ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ಗೆಲ್ಲುವುದು ಅವರ ಕನಸ್ಸು ಮಾತ್ರ, ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ, ಬೆಳಗಾವಿ ಉಪ ಚುನಾವಣೆಯಲ್ಲಿ ಹೇಳಹೆಸರಿಲ್ಲದಂತೆ ಸೋಲುಂಡಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷ ದೇಶದಲ್ಲಿ ಒಡೆದ ಮನೆ. ಅವರ ಮನೆ ಅವರಿಗೆ ತೊಳೆದುಕೊಳ್ಳಲು ಆಗುತ್ತಿಲ್ಲ ಬೇರೆಯವರ ಬಗ್ಗೆ ಏನು ಚಿಂತೆ ಮಾಡ್ತಾರೆ ಅಂತ ಆರ್ ಅಶೋಕ ವಾಗ್ದಾಳಿ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button